ಲಯನ್ಸ್ ಕ್ಲಬ್ ಉಡುಪಿ ರಾಯಲ್: ರೋಗ ನಿರೋಧಕ ಔಷಧ ಗಿಡ ಮೂಲಿಕೆ ವಿತರಣೆ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ರಾಯಲ್ ಮತ್ತು ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ (ರಿ.) ಇದರ ಆಶ್ರಯದಲ್ಲಿ ರೋಗ ನಿರೋಧಕ ಔಷಧ ಗಿಡ ಮೂಲಿಕೆ ವಿತರಣೆ ಮತ್ತು ಮಾಹಿತಿ ಕಾರ್ಯಕ್ರಮ ಅಂಬಲಪಾಡಿ ಕಾರ್ತಿಕ್ ಎಸ್ಟೇಟ್ ನಲ್ಲಿ ನಡೆಯಿತು.
ಕುತ್ಪಾಡಿ ಎಸ್.ಡಿ.ಎಮ್ ಆಯುರ್ವೇದ ಆಸ್ಪತ್ರೆಯ ದ್ರವ್ಯಗುಣ ವಿಭಾಗದ ಉಪನ್ಯಾಸಕರಾದ ಡಾ. ಸುಮ ವಿ. ಮಲ್ಯ ಅವರು ಔಷಧ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಮೃತ ಬಳ್ಳಿ ಮತ್ತು ಅರಶಿನ ಕೊಂಬು ಗಿಡ ಮೂಲಿಕೆ ವಿತರಿಸಲಾಯಿತು.


ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರರಾದ ಶ್ರೀ ಹರಿಯಪ್ಪ ಕೋಟ್ಯಾನ್ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಪ್ರಸ್ತಾವನೆಗೈದರು.ಲಯನ್ಸ್ ಕ್ಲಬ್ ಉಡುಪಿ ರಾಯಲ್ ನ ಅಧ್ಯಕ್ಷರಾದ ಲಯನ್ ಡಾ. ಸಂತೋಷ್ ಕುಮಾರ್ ಬೈಲೂರು ಸ್ವಾಗತಿಸಿದರು.ಕಾರ್ಯದರ್ಶಿ ರಾಜೇಶ್ ಬಂಗೇರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!