ಹಾಸನ: ಕೊಲೆ ಪ್ರಕರಣ ತನಿಖೆ ನಡೆಸುತ್ತಿದ್ದ ಪಿಎಸ್ಐ ಆತ್ಮಹತ್ಯೆ!

ಹಾಸನ: ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ಠಾಣೆಯ  ಪಿಎಸ್ ಐ ಕಿರಣ್ ಕುಮಾರ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಮೂಲಗಳ ಪ್ರಕಾರ ಜುಲೈ 30ರ ರಾತ್ರಿ ಕಿರಣ್ ಕುಮಾರ್ ಕರ್ತವ್ಯದಲ್ಲಿದ್ದರು, ಅವರು ಕೊಲೆ ಆರೋಪಿಯೊಬ್ಬನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಶುಕ್ರವಾರ ಬೆಳಿಗ್ಗೆ ಪ್ರಕರಣದ ಕುರಿತ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಅವರು ಮನೆಗೆ ತೆರಳಿದ್ದಾರೆ.

ಇದೀಗ ಅವರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಈ ಘಟನೆಗೆ ನಿಖರ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತ ಪೋಲೀಸ್ ಅಧಿಕಾರಿಯ ಶವವನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಚೆನ್ನರಾಯಪಟ್ಟಣದಲ್ಲಿ ಕೇವಲ ಎರಡು ದಿನಗಳಲ್ಲಿ ಎರಡು ಕೊಲೆಗಳು ನಡೆದಿದೆ. ಈ ಕೊಲೆಗಳ ತನಿಖೆ ತಂಡದಲ್ಲಿ ಕಿರಣ್ ಕುಮಾರ್ ಸಹ ಇದ್ದರು. ಸ್ಥಳಕ್ಕೆ ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Leave a Reply

Your email address will not be published. Required fields are marked *