ಪ್ರಬಲ ಪ್ರತಿಸ್ಪರ್ಧಿ ಇಲ್ಲದ ಕಾರಣ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗುತ್ತಿದೆ- ಮಮತಾ

ಕೊಲ್ಕತ್ತಾ: ಬಿಜೆಪಿಗೆ ಪರ್ಯಾಯವಾಗಿ ಮತ್ತೊಂದು ಶಕ್ತಿ ಕಂಡುಕೊಂಡ ದಿನವೇ ಜನ ಕೇಂದ್ರದಲ್ಲಿ ಕೇಸರಿ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಹೇಳಿದ್ದಾರೆ.

ನಾವು ಸಕ್ರಿಯರಾಗಿರಬೇಕು, ಬಿಜೆಪಿಯನ್ನು ತೊಡೆದುಹಾಕಲು 2024ರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡ ಬೇಕಾಗಿದೆ. ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ರೂಪಿಸಲು ತಮ್ಮ ಪಕ್ಷ ಸೇರಿದಂತೆ ಇತರ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಟಿಎಂಸಿ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ.

ಟಿಎಂಸಿ ಸಂಘಟನಾ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಪರ್ಯಾಯ ಮಾರ್ಗವಿಲ್ಲದ ಕಾರಣ ಬಿಜೆಪಿಯೇ ಇನ್ನೂ ಅಧಿಕಾರದಲ್ಲಿದೆ. ಮುಂದೊಂದು ದಿನ ಅದನ್ನು ಹೊರಹಾಕಲಾಗುತ್ತದೆ ಎಂದು ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದರು.

”ಬಿಜೆಪಿ ‘ದಂಗಬಾಜ್’ (ಗಲಭೆಕೋರ) ಮತ್ತು ಭ್ರಷ್ಟ ಪಕ್ಷವಾಗಿದೆ. ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಾರೆ. ಭಾರತೀಯ ಜನತಾ ಪಕ್ಷವನ್ನು ಗಲಭೆಕೋರರ ಪಕ್ಷ. ಹಾಗಾಗಿ ದೇಶಕ್ಕೆ ‘ಪರ್ಯಾಯ ಶಕ್ತಿ’ಯ ಅಗತ್ಯವಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಪರ್ಯಾಯ ಶಕ್ತಿ ರೂಪಿಸುವುದು ಪ್ರತಿಪಕ್ಷಗಳ ಕರ್ತವ್ಯ ಎಂದು ಮಮತಾ ಹೇಳಿದರು. ನಿನ್ನೆ ವಿಧಾನಸೌಧದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ್ದಕ್ಕಾಗಿ ಟಿಎಂಸಿಯ ಮಹಿಳಾ ಶಾಸಕರಿಗೆ ಧನ್ಯವಾದಗಳು, ”ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಡೆದ ಗದ್ದಲವನ್ನು ಉಲ್ಲೇಖಿಸಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!