ಎಲೆಕ್ಷನ್ ಆಫರ್ ಸದ್ಯದಲ್ಲೇ ಕೊನೆಯಾಗಲಿದ್ದು, ಶೀಘ್ರವಾಗಿ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿ-ರಾಹುಲ್ ಗಾಂಧಿ ವ್ಯಂಗ್ಯ
ನವದೆಹಲಿ, ಮಾ 06: ಭಾರತದ ಜನರು ಆದಷ್ಟು ಬೇಗ ಪೆಟ್ರೋಲ್ ತುಂಬಿಸಿಟ್ಟುಕೊಳ್ಳಬೇಕು. ಯಾಕೆಂದರೆ ನರೇಂದ್ರ ಮೋದಿ ಸರ್ಕಾರವು ಪಂಚ ರಾಜ್ಯಗಳ ಚುನಾವಣೆ ಮುಗಿಯಲಿರುವುದರಿಂದ ಬೆಲೆ ಏರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದ್ದ ಎಲೆಕ್ಷನ್ ಆಫರ್ ಸದ್ಯದಲ್ಲೇ ಕೊನೆಯಾಗಲಿದ್ದು, ಆದಷ್ಟು ಶೀಘ್ರವಾಗಿ ಪೆಟ್ರೋಲ್ ಟ್ಯಾಂಕ್ ಗಳನ್ನು ಭರ್ತಿ ಮಾಡಿಸಿಕೊಳ್ಳಿ ಎಂದಿದ್ದಾರೆ.ಇನ್ನು ಕಾಂಗ್ರೆಸ್ ಈ ಹಿಂದೆ ಕೂಡ ಪೆಟ್ರೋಲ್ ಬೆಲೆ ಇಳಿಸಿದ್ದು ಚುನಾವಣಾ ತಂತ್ರ ಎಂದು ಆರೋಪಿಸಿತ್ತು. ಅಲ್ಲದೇ ಮತದಾರರನ್ನು ಒಲಿಸಲು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಟೀಕಿಸಲಾಗಿತ್ತು.ರಷ್ಯಾ ಮತ್ತು ಉಕ್ರೇನ್ ಯುದ್ದದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಇಂಧನ ದರ ಏರಿಕೆಯಾಗುತ್ತಿದ್ದು, ಶುಕ್ರವಾರದಂದು ಪ್ರತಿ ಬ್ಯಾರೆಲ್ ಗೆ 111 ಡಾಲರ್ ದಾಖಲಾಗಿತ್ತು