ಉಡುಪಿ: ಸ್ಪಿರುಲಿನಾ ಚಿಕ್ಕಿ ವಿತರಣೆ
ಉಡುಪಿ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ – 19 ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಜಿಲ್ಲಾಸ್ಪತ್ರೆಯ ವೈದ್ಯರಿಗೆ,ಸಿಬ್ಬಂದಿಗಳಿಗೆ(ಕೋವೀಡ್ ವಾರಿಯರ್ಸ್) ತುಮಕೂರಿನ ಸ್ಪಿರುಲಿನಾ ಫೌಂಡೇಷನ್ ಇವರ ಸಲಹೆಯ ಮೇರೆಗೆ ‘ಸಾತ್ವಿಕ್ ಸ್ಟೋರ್ ಪರ್ಕಳ’ ಇವರ ವತಿಯಿಂದ 150 ಪ್ಯಾಕೆಟ್ ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಯಿತು.
ಸ್ಪಿರುಲಿನಾ ಚಿಕ್ಕಿ : ಇದೊಂದು ಸೂಕ್ಷ್ಮಾಣು ಜೀವಿಯಾಗಿದ್ದು,ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹದಲ್ಲಿ ಬೇರೆಲ್ಲಾ ಆಹಾರಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೀರಪಡುತ್ತದೆ,ಇದರ ಪರಿಣಾಮವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಯಾವುದೇ ವೈರಾಣು ಸೋಂಕನ್ನು ಪ್ರತಿರೋಧಿಸುವಲ್ಲಿ ಸಹಕಾರಿಯಾಗಿದೆಯೆಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(CFTRI) ಮೈಸೂರು ಇವರ ಸಾಕಷ್ಟು ಸಂಶೋಧನೆ ವರದಿಗಳಿಂದ ದೃಡ ಪಟ್ಟಿರುತ್ತದೆ.
ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು ,ಮಂಡ್ಯ,ಮಡಿಕೇರಿ ಬೆಂಗಳೂರಿನಲ್ಲಿ ,ಸೋಂಕಿತರು,ಶಂಕಿತರು,ಆಸ್ಪತ್ರೆ ಸಿಬ್ಬಂದಿ,ಪೊಲೀಸ್ ಸಿಬ್ಬಂದಿಗಳಿಗೆ ಸ್ಪಿರುಲಿನಾ ಚಿಕ್ಕಿಯನ್ನು ವಿತರಿಸಲಾಗಿದೆ.ಸ್ಪಿರುಲಿನಾ ಫೌಂಡೇಷನ್’ ಇವರು 2010ರಲ್ಲಿ ಸ್ಪಿರುಲಿನಾ ಕುರಿತ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು,ಹಾಗೂ 2019ರಿಂದ ಸ್ಪಿರುಲಿನಾ ನ್ಯೂಟ್ರಾ ಚಿಕ್ಕಿ ತಯಾರಿಸುವ ಕುರಿತು CFTRI ಮೈಸೂರು ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಹಾಗೂ ರಾಜ್ಯದ ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ತರಬೇತಿಯನ್ನೂ ನೀಡಲು ಸಿದ್ಧರಿರುತ್ತಾರೆ. ಈ ಸಂಧರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಧುಸೂಧನ್ ನಾಯಕ್ ಹಾಗೂ ಮೆಡಿಕಲ್ ಆಫೀಸರ್ ಡಾ.ಚಂದ್ರಶೇಖರ್ ಅಡಿಗ ಮತ್ತು ಸಾತ್ವಿಕ್ ಸ್ಟೋರ್ ನ ಮಾಲಕರು ಉಪಸ್ಥಿತರಿದ್ದರು.