ಕದನ ವಿರಾಮ ಘೋಷಣೆ?- ನಾಗರಿಕರಿಗೆ ಮಾನವೀಯ ಕಾರಿಡಾರ್‌ ತೆರೆಯುವುದಾಗಿ ರಷ್ಯಾ ಭರವಸೆ

ಮಾಸ್ಕೊ: ರಷ್ಯಾ-ಉಕ್ರೇನ್ ನಡುವೆ ಸೇನಾಪಡೆ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಗೋಚರಿಸುತ್ತಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 11.30ರ ಹೊತ್ತಿಗೆ ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ ಮಾಡಿದೆ.

ಮಾನವೀಯ ದೃಷ್ಟಿಯಿಂದ ಉಕ್ರೇನ್ ನಾದ್ಯಂತ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ರಷ್ಯಾ ಘೋಷಣೆ ಮಾಡಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು ಮುಕ್ತಗೊಳಿಸಲಾಗುವುದು ಎಂದು ಹೇಳಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿದ 10 ದಿನಗಳ ನಂತರ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ.

ಇದು ತಾತ್ಕಾಲಿಕ ಯುದ್ಧ ವಿರಾಮ ಘೋಷಣೆ ? ಎಷ್ಟು ಹೊತ್ತಿನವರೆಗೆ ಅಥವಾ ದಿನಗಳವರೆಗೆ ಇರುತ್ತದೆ ಎಂದು ಕಾದುನೋಡಬೇಕಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆದಿದ್ದರೂ ಯಾವುದೇ ನಿರ್ಧಾರ ಅಥವಾ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. 

ಇಂದು ಮಾರ್ಚ್ 5, ರಷ್ಯಾ ಸಮಯ ಬೆಳಿಗ್ಗೆ 10ರಿಂದ ಯುದ್ಧ ವಿರಾಮ ಘೋಷಣೆ ಮಾಡಲಾಗಿದೆ. ಮರಿಯಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್‌ಗಳನ್ನು ರಷ್ಯಾ ಸರ್ಕಾರ ತೆರೆಯುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯಪೋಲ್ ಅನ್ನು ದಿಗ್ಬಂಧನಗೊಳಿಸಿವೆ ಎಂದು ಮರಿಯಪೋಲ್ ಮೇಯರ್ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ.ರಷ್ಯಾದ ಪಡೆಗಳು ಕಳೆದ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು, ರಷ್ಯಾ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಯುದ್ಧ ಘೋಷಣೆಯಾಗಿತ್ತು. ಈ ವಾರಾಂತ್ಯದಲ್ಲಿ ರಷ್ಯಾ ಜೊತೆ ಉಕ್ರೇನ್ ಮಾತುಕತೆಗೆ ಯೋಜಿಸಿದೆ ಎಂದು ಕೀವ್ ನ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.

ಸ್ಥಳಾಂತರಕ್ಕೆ ಅವಕಾಶ: ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿರುವುದರಿಂದ ಬಂದರು ನಗರಿ ಮರಿಯಪೋಲ್ ಸೇರಿದಂತೆ ಎರಡು ದೊಡ್ಡ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಕ್ಕಿದೆ, ಕದನ ವಿರಾಮ ಘೋಷಣೆಯಿಂದ ಮಾರಿಯುಪೋಲ್ ಮತ್ತು ವೊಲ್ನೊವಕ್ಹ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಗಲಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ಫೆಬ್ರವರಿ 24 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೇತೃತ್ವದ ರಷ್ಯಾ ಸೈನ್ಯವು ಆಕ್ರಮಣ ಮಾಡಿದ ನಂತರ, ರಷ್ಯಾ ಉಕ್ರೇನ್ ನ ಸಾಕಷ್ಟು ನಗರಗಳನ್ನು ಹೊಡೆದುರುಳಿಸಿದೆ. ನೂರಾರು ನಾಗರಿಕರನ್ನು ಕೊಂದಿದೆ, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿದೆ.

Leave a Reply

Your email address will not be published. Required fields are marked *

error: Content is protected !!