‘ನಮಸ್ಕಾರ’ ಆಟಿದ ಕಮ್ಮೆನೊದ ಉನಸ್ ರೆಡಿಯಾದ್ ನಿಕ್ಲೆನ ಇಲ್ಲಗ್ ಬರೊಂದುಂಡು!
ಉಡುಪಿ (ಉಡುಪಿ ಟೈಮ್ಸ್ ವರದಿ): ತುಳುನಾಡ ಸಾಂಪ್ರದಾಯಿಕ ಶೈಲಿಯ ಊಟೋಪಚಾರಕ್ಕೆ ಹೆಸರುವಾಸಿಯಾದ ಉದ್ಯಾವರದ ಹೋಟೆಲ್ ‘ನಮಸ್ಕಾರ’, ಈ ಬಾರಿ ಕೊರೋನಾ ಸಂಕಷ್ಟ್ಟದ ಸಮಯದಲ್ಲಿ ಆಟಿಯ ಊಟವನ್ನು ನಿಮ್ಮ ಮನೆಯಲ್ಲಿಯೇ ಉಣಬಡಿಸಲಿದ್ದಾರೆ.
ಆರೋಗ್ಯಕರವಾಗಿ ಹಾಗು ರುಚಿಕರವಾಗಿ ಸಂಪೂರ್ಣ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಿಮ್ಮ ನೆಚ್ಚಿನ ಸಸ್ಯಾಹಾರಿ ಊಟ, ಉಚಿತ ಹೋಂ ಡೆಲಿವರಿ ಮೂಲಕ ಆಕರ್ಷಕ ದರದಲ್ಲಿ ನಿಮ್ಮ ಮನೆ ತಲುಪಲಿದೆ.
ತುಳುನಾಡ ಜನರ ಆಟಿಯ ದಿನಗಳ ಅತ್ಯಂತ ಪ್ರೀತಿ ಪಾತ್ರವಾದ ಖಾದ್ಯಗಳಾದ ಅರಶಿನ ಎಲೆ ಕಡಬು, ಪತ್ರೊಡೆ, ಹುರುಳಿ ಸಾರು, ಹುರಳಿ ಚಟ್ನಿ, ಪುರ್ನಪುಲಿ ಮಜ್ಜಿಗೆ, ಸಂಡಿಗೆ ಮೆಣಸು, ಉಪ್ಪಡ್ ಪಚ್ಚಿರ್, ಮೂಡೆ, ಕಷಾಯ, ಮಿಡಿ ಉಪ್ಪಿನಕಾಯಿ, ಬೇಯಿಸಿದ ಮಾವಿನಕಾಯಿ ಬಜ್ಜಿ, ತಂಜಕ ಹಾಗಿ, ಇಡೀ ಹೆಸರು, ಹಲಸಿನ ಬೇಳೆ ಪಲ್ಯ, ಇಡಿ ಹೆಸರು ಗಸಿ, ತಿಮರೆ ಸೊಪ್ಪಿನ ಚಟ್ನಿ, ಕೆಸುವಿನ ದಂಟು ಹುಳಿ, ಪರಡಿ ಪಾಯಸ, ಅಮಟೆ ಕಾಯಿ ಭರತ, ಕಷಾಯ ಸಹಿತ ವಿವಿಧ ರುಚಿಯಾದ ಊಟದ ಸವಿ ನೀಡಲು ‘ನಮಸ್ಕಾರ ಹೋಟೆಲ್’ ಸಿದ್ಧವಾಗಿದೆ.
ಗ್ರಾಹಕರಿಗೆ ಸ್ಪೆಷಲ್ ಆಟಿದ ಊಟ ಆಗಸ್ಟ್ 1 ಶನಿವಾರ, (ನಾಳೆ) ಮಾತ್ರ ಈ ಸೇವೆ ಲಭ್ಯವಿದೆ ಎಂದು ನಮಸ್ಕಾರ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಉಡುಪಿ, ಮಣಿಪಾಲ, ಉದ್ಯಾವರದ ಆಸುಪಾಸಿಗೆ ಹೋಂ ಡೆಲಿವರಿ ಇದ್ದು, ಉಡುಪಿಯ ಹೊರಗಿನ ಪ್ರದೇಶಗಳಿಗೆ 3 ಊಟವನ್ನು ಆರ್ಡರ್ ಮಾಡಿದ್ದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು. ನಿಮ್ಮ ಆರ್ಡರ್ ನ್ನು ಈ ನಂಬರಿಗೆ 70269 33000 ಕರೆ ಮಾಡುವುದರ ಮೂಲಕ ನಿಮ್ಮ ಆರ್ಡರ್ ನ್ನು ನಿಗದಿ ಪಡಿಸಿಕೊಳ್ಳಿ. ಮನೆಯಲ್ಲಿಯೇ ಕೂತು ನಿಮ್ಮವರೊಂದಿಗೆ ಆಟಿ ದಿನಗಳ ಊಟವನ್ನು ಸವಿಯಿರಿ.
ಕೆಮ್ಮಾಲೆ ಗ್ರೂಪ್ ಆಫ್ ಕಂಪೆನಿಯ ‘ನಮಸ್ಕಾರ’ ಹೋಟೆಲ್ ಉದ್ಯಾವರದಲ್ಲಿದ್ದು, ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಗ್ರಾಹಕರಿಗೆ ಶುಚಿ ರುಚಿಯಾದ ಸಸ್ಯಾಹಾರಿ ಊಟವನ್ನು ಮತ್ತೆ ನೀಡಲು ಸಿದ್ಧವಾಗಿದೆ. ಮಾತ್ರವಲ್ಲದೆ ಬೇಕ್ ಸ್ಟುಡಿಯೋದ ಮೂಲಕ ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಭ ಸಮಾರಂಭಗಳಿಗಾಗಿ ಗ್ರಾಹಕರಿಗೆ ವಿವಿಧ ವಿನ್ಯಾಸಗಳ ಕೇಕ್ ಗಳನ್ನು ಸಿದ್ಧಪಡಿಸುವುದರಲ್ಲಿ ಹೆಸರುವಾಸಿಯಾಗಿದೆ.
Good luck. God bless you and your family & team.