ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರ ಯಾಗ

ಕಾಪು: ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರ ಯಾಗ ಸಂಪನ್ನ ಟೀಮ್ ಮೋದಿ ಕಾಪು ವಲಯದ ವತಿಯಿಂದ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಯೊಂದಿಗೆ ಲೋಕ ಕಲ್ಯಾಣಾರ್ಥದ ಸಂಕಲ್ಪದೊಂದಿಗೆ ಆಯೋಜಿಸಿದ್ದ ಮಹಾರುದ್ರ ಯಾಗ ಮಡುಂಬು‌ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನ ಗೊಂಡಿತು.

ಜ್ಯೋತಿರ್ವಿದ್ವಾನ್  ಪ್ರಕಾಶ್ ಅಮ್ಮಣ್ಣಾಯ ಮಾರ್ಗದರ್ಶನದಲ್ಲಿ, ಪುರೋಹಿತರಾದ ಶ್ರೀವತ್ಸ ಭಟ್ ಹಾಗೂ ಜನಾರ್ಧನ ತಂತ್ರಿ ನೇತೃತ್ವದಲ್ಲಿ ನಡೆದ ಮಹಾರುದ್ರ ಯಾಗದಲ್ಲಿ ಯಶ್ಪಾಲ್ ಸುವರ್ಣ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಭಾರತದ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಸಹಿತ ಇನ್ನಷ್ಟು ಕಾಲ ದೇಶ ಮುನ್ನಡೆಸುವಂತಾಗಲಿ ಹಾಗೂ ಸಮಸ್ತ ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿ ಯೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಯಾಗವನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀಕಾಂತ ನಾಯಕ್, ನಯನ ಗಣೇಶ್, ಸುರೇಶ್ ಶೆಟ್ಟಿ ಗುರ್ಮೆ, ಕೇಸರಿ ಯುವರಾಜ್, ಮಾಲಿನಿ ಶೆಟ್ಟಿ, ಸುಮಾ ಶೆಟ್ಟಿ, ಮಂಜುಳಾ ಪ್ರಸಾದ್, ಟೀಮ್ ಮೋದಿ ಕಾಪು ವಲಯದ ಪ್ರಮುಖರಾದ ಯೋಗೀಶ್ ಪೂಜಾರಿ, ಬಾಲಕೃಷ್ಣ ಕಾಪು, ಅಶ್ವಿನ್, ಲಕ್ಷ್ಮೀಕಾಂತ್, ಸುವಿತ್, ನಾಗೇಶ್’ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!