ರಾಜ್ಯದಲ್ಲಿ ಕೊರೋನಾ ಅಟ್ಟಹಾಸ: ಮಹಾಮಾರಿಗೆ ಇಂದು 83 ಬಲಿ, 6128 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 83 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೋನಾ ಸಾವಿನ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ 6128 ಹೊಸ ಪ್ರಕರಣಗಳು ವರದಿಯಾಗಿದ್ದು, 83 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,18,632ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 3793 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2230 ಮಂದಿ ಸಾವನ್ನಪ್ಪಿದ್ದು, 69700 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 620 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಕೋವಿಡ್‌ ಮಹಾಮಾರಿಯ ಆರ್ಭಟ ಎಂದಿನಂತೆ ಮುಂದುವರಿದಿದ್ದು, 2,233 ಹೊಸ ಪ್ರಕರಣಗಳು ವರದಿಯಾಗಿವೆ. ಗುರುವಾರ ನಗರದಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಸೋಂಕಿತ ಪ್ರಕರಣಗಳು 53,324ಕ್ಕೆ ತಲುಪಿದ್ದು, 36,523 ಸಕ್ರಿಯ ಪ್ರಕರಣಗಳಿವೆ.

ಮೈಸೂರಿನಲ್ಲಿ 430, ಬಳ್ಳಾರಿಯಲ್ಲಿ 343, ಉಡುಪಿಯಲ್ಲಿ 248, ಬೆಂಗಳೂರು ಗ್ರಾಮಾಂತರದಲ್ಲಿ 224, ಕಲಬುರಗಿಯಲ್ಲಿ 220, ಬೆಳಗಾವಿಯಲ್ಲಿ 202, ದಕ್ಷಿಣ ಕನ್ನಡದಲ್ಲಿ 198, ಧಾರವಾಡದಲ್ಲಿ 180, ರಾಯಚೂರಿನಲ್ಲಿ 166, ಶಿವಮೊಗ್ಗದಲ್ಲಿ 143, ಚಿಕ್ಕಮಗಳೂರಿನಲ್ಲಿ 126, ವಿಜಯಪುರದಲ್ಲಿ 124, ಉತ್ತರಕನ್ನಡದಲ್ಲಿ 120, ರಾಮನಗರದಲ್ಲಿ 106, ತುಮಕೂರಿನಲ್ಲಿ 104 ಪ್ರಕರಣಗಳು ವರದಿಯಾಗಿವೆ.

ಹಾಸನದಲ್ಲಿ 94, ಗದಗದಲ್ಲಿ 88, ಮಂಡ್ಯದಲ್ಲಿ 87, ದಾವಣಗೆರೆಯಲ್ಲಿ 86, ಚಿಕ್ಕಬಳ್ಳಾಪುರದಲ್ಲಿ 82, ಕೊಪ್ಪಳದಲ್ಲಿ 78, ಬೀದರ್‌ನಲ್ಲಿ 69, ಯಾದಗಿರಿಯಲ್ಲಿ 58, ಹಾವೇರಿಯಲ್ಲಿ 58, ಚಿತ್ರದುರ್ಗದಲ್ಲಿ 47, ಕೋಲಾರದಲ್ಲಿ 32, ಚಾಮರಾಜನಗರದಲ್ಲಿ 32, ಕೊಡಗಿನಲ್ಲಿ 24 ಪ್ರಕರಣಗಳು ವರದಿಯಾಗಿವೆ.

ಕೊಡಗಿನಲ್ಲಿ 6, ಚಾಮರಾಜನಗರದಲ್ಲಿ 6,ಕೋಲಾರದಲ್ಲಿ 25, ಚಿತ್ರದುರ್ಗದಲ್ಲಿ 6, ಹಾವೇರಿಯಲ್ಲಿ 25, ಯಾದಗಿರಿಯಲ್ಲಿ 3, ಬೀದರ್‌ನಲ್ಲಿ 2, ಕೊಪ್ಪಳದಲ್ಲಿ 1, ದಾವಣಗೆರೆಯಲ್ಲಿ 1, ಗದಗದಲ್ಲಿ 1, ಹಾಸನದಲ್ಲಿ 6, ತುಮಕೂರಿನಲ್ಲಿ 1, ಉತ್ತರಕನ್ನಡದಲ್ಲಿ 2, ಚಿಕ್ಕಮಗಳೂರಿನಲ್ಲಿ 1, ಬಾಗಲಕೋಟೆಯಲ್ಲಿ 2, ಶಿವಮೊಗ್ಗದಲ್ಲಿ 1, ದಾರವಾಡದಲ್ಲಿ 8, ದಕ್ಷಿಣ ಕನ್ನಡದಲ್ಲಿ 7, ಬೆಳಗಾವಿಯಲ್ಲಿ 4, ಕಲಬುರಗಿಯಲ್ಲಿ 7, ಉಡುಪಿಯಲ್ಲಿ 4, ಮೈಸೂರಿನಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!