ಮಂಗಳೂರು: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ಮೂವರು ವಶಕ್ಕೆ- ನಾಲ್ವರು ಯುವತಿಯರ ರಕ್ಷಣೆ

ಮಂಗಳೂರು ಮಾ.2: ನಗರದ ಬೆಂದೂರ್ ವೆಲ್ ನ ಅಪಾರ್ಟ್‍ಮೆಂಟ್ ವೊಂದರ ಫ್ಲಾಟ್ ವೊಂದರಲ್ಲಿ ಕಾರ್ಯಚರಿಸುತ್ತಿದ್ದ ವೇಶ್ಯಾವಾಟಿಕೆ ದಂದೆಗೆ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಪಿಂಪ್ ಗಳನ್ನು ವಶಕ್ಕೆ ಪಡೆದು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ವಿಟ್ಲ ಪಡ್ನೂರಿನ ಕೆ.ಪಿ. ಹಮೀದ್(54), ಮಂಗಳೂರಿನ ಅನುಪಮ ಶೆಟ್ಟಿ(46), ನಿಶ್ಮಿತ(23) ಪ್ರಕರಣದ ಆರೋಪಿಗಳು. ಬೆಂದುರ್ ವೆಲ್ ನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳಿಂದ 5 ಮೊಬೈಲ್ ಫೋನ್ ಗಳು, 50,000 ರೂ. ನಗದು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!