ಹೆಬ್ರಿ: ಮಹಿಳೆ ನೇಣಿಗೆ ಶರಣು

ಹೆಬ್ರಿ ಮಾ.2(ಉಡುಪಿ ಟೈಮ್ಸ್ ವರದಿ): ತಮಗಿದ್ದ ಅನಾರೋಗ್ಯದಿಂದ ಮನನೊಂದು ಹೆಬ್ರಿಯ ಅಪ್ಪಿ ಪೂಜಾರ್ತಿ ಎಂಬವರು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

78 ವರ್ಷದ ಅಪ್ಪಿ ಪೂಜಾರ್ತಿ ಅವರು ಹಲವು ವರ್ಷಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ  ಚಿಕಿತ್ಸೆ ಮಾಡಿಸಿದರೂ ಗುಣಮುಖರಾಗಿರುವುದಿಲ್ಲ. ಇದೇ ವಿಚಾರದಲ್ಲಿ ಮನನೊಂದು ಇಂದು ಮಧ್ಯಾಹ್ನದ ವೇಳೆ ಹೆಬ್ರಿ ಗ್ರಾಮದ ಹೆಬ್ಬಾಗಿಲುಮನೆ ಹೊಸೂರು ಎಂಬಲ್ಲಿರುವ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!