ಉಕ್ರೇನ್: ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು!
ಖಾರ್ಕೀವ್ ಮಾ.2: ಎಲ್ಲಾ ಭಾರತೀಯರು ಸುರಕ್ಷತೆ ಮತ್ತು ಭದ್ರತೆಗಾಗಿ ತಕ್ಷಣವೇ ಖಾರ್ಕಿವ್ ಅನ್ನು ತೊರೆಯುವಂತೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿದೆ.
ರಷ್ಯಾ ಸೈನಿಕರ ಶೆಲ್ ದಾಳಿಗೆ ನಿನ್ನೆ ಕರ್ನಾಟಕ ಮೂಲದ ವಿದ್ಯಾರ್ಥಿ ನಿವೀನ್ ಅವರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪಂಜಾಬ್ ನ ಬರ್ನಾಲ್ ಗ್ರಾಮದ ಚಂದನ್ ಜಿಂದಾಲ್ ಯುದ್ಧ ಭೂಮಿಯಲ್ಲಿ ಮೃತಪಟ್ಟಿದ್ದಾರೆ. ರಷ್ಯಾ ದಾಳಿ ವೇಳೆ ಚಂದನ್ ಜಿಂದಾಲ್ ಗೆ ಬ್ರೇನ್ ಸ್ಟ್ರೋಕ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಸೂಚನೆ
ನೀಡಿದ್ದು, “ಖಾರ್ಕಿವ್‌ನಲ್ಲಿರುವ ಎಲ್ಲಾ ಭಾರತೀಯ ರಾಷ್ಟ್ರೀಯರಿಗೆ ತುರ್ತು ಸಲಹೆ. ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ತಕ್ಷಣವೇ ಖಾರ್ಕಿವ್ ಅನ್ನು ತೊರೆಯಬೇಕು.” ಎಂದು ತಿಳಿಸಿದೆ ಎಂಬೂದಾಗಿ ತಿಳಿದು ಬಂದಿದೆ.