ಕಾರ್ಕಳ: ವಿವಾಹಿತ ನಾಪತ್ತೆ

ಕಾರ್ಕಳ ಮಾ.2 (ಉಡುಪಿ ಟೈಮ್ಸ್ ವರದಿ): ಚಿಕ್ಕಮಂಗಳೂರಿನಲ್ಲಿರುವ ತಂದೆ, ತಾಯಿಯವರ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದ ಕಾರ್ಕಳದ ರವಿಕಿರಣ್ ಎಂಬವರು ನಾಪತ್ತೆಯಾಗಿದ್ದಾರೆ.

ಫೆ.16 ರಂದು ರವಿಕಿರಣ್ (35) ಅವರು ಪತ್ನಿ ಝಾನ್ಸಿ ಅವರ ಬಳಿ ಚಿಕ್ಕಮಂಗಳೂರಿನ ಗಾಲಿಯಲ್ಲಿರುವ ತನ್ನ ತಂದೆ, ತಾಯಿಯವರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ತಂದೆ, ತಾಯಿಯ ಮನೆಗೂ, ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿದ್ದಾರೆ. ರವಿ ಕಿರಣ್ ಅವರು ನೀಲಿ ಬಣ್ಣದ ಷರ್ಟ್ ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿದ್ದು, ತಮಿಳು, ಕನ್ನಡ, ತುಳು, ತೆಲುಗು, ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!