ಬಂಟ್ವಾಳ: ಚೂರಿ ಹಿಡಿದು ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ

ಬಂಟ್ವಾಳ, ಮಾ 02: ಚೂರಿ ಹಿಡಿದುಕೊಂಡು ಮಸೀದಿಯೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಬಿಸಿರೋಡ್ ಬಳಿಯ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಆರೋಪಿ ಬಾಬು ಪೂಜಾರಿ(60) ಎನ್ನುವವ ಮಂಗಳವಾರ ರಾತ್ರಿ ಮಸೀದಿ ಬಳಿ ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದಲ್ಲದೆ, ಮಸೀದಿಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ತಾನು ಮಡಿಕೇರಿಯಿಂದ ಬಂದಿದ್ದು, ಪ್ರಾರ್ಥನೆ ಮಾಡಲು ಒಬ್ಬ ಧರ್ಮಗುರು ಬೇಕು ಎಂದಿದ್ದಾನೆ. ಆತನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ಅದರಲ್ಲಿ ಚಾಕು ಇರುವುದು ಪತ್ತೆಯಾಗಿದೆ. ತತ್ ಕ್ಷಣ ಸ್ಥಳೀಯರು ಮಸೀದಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಬಳಿಕ ವಿಚಾರಿಸಿದಾಗ ಆತ ಕಲ್ಲಡ್ಕ ನಿವಾಸಿ ಬಾಬು ಎಂಬುದಾಗಿ ತಿಳಿದು ಬಂದಿದೆ. ಬಂಟ್ವಾಳ ಪೋಲಿಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ

Leave a Reply

Your email address will not be published. Required fields are marked *

error: Content is protected !!