ಬ್ರಹ್ಮಾವರ “ಸತ್ಯನಾಥ್ ಸ್ಟೋರ್” ಪ್ರಥಮ ವರ್ಷದ ಸಂಭ್ರಮಾಚರಣೆ- ಶೇ.15-30 ವಿಶೇಷ ರಿಯಾಯಿತಿ

ಉಡುಪಿ ಮಾ.2 (ಉಡುಪಿ ಟೈಮ್ಸ್ ವರದಿ): ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರಸಿದ್ಧ “ಸತ್ಯನಾಥ್ ಸ್ಟೋರ್” ಬ್ರಹ್ಮಾವರದ ನೂತನ ಮಳಿಗೆಯ ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಗ್ರಾಹಕರಿಗಾಗಿ 15 ಶೇ. ದಿಂದ 30 ಶೇ. ದ ವರೆಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಈ ವಿಶೇಷ ಕೊಡುಗೆಯು ಮಾ.1 ರಿಂದ 7 ರ ತನಕ ನಡೆಯಲಿದ್ದು, ಕನಿಷ್ಠ ಶೇ.15 ರಿಂದ ಶೇ. 30ರ ವರೆಗೆ ರಿಯಾಯ್ತಿ ನೀಡಲಾಗುವುದು. ಈ ಕೊಡಗೆಯಲ್ಲಿ ಪುರುಷರ 1 ಬ್ರ್ಯಾಂಡೆಡ್ ಉಡುಪು ಖರೀದಿಸಿದರೆ 2 ಬ್ರ್ಯಾಂಡೆಡ್ ಉಡುಪುಗಳನ್ನು ನೀಡಲಾಗುವುದು.

ಸತ್ಯನಾಥ್ ಸ್ಟೋರ್ ನಲ್ಲಿ ಸಾಂಪ್ರದಾಯಿಕ, ಬ್ರಾಂಡೆಡ್ ಮತ್ತು ಆದುನಿಕ ಶೈಲಿಯ ನವನವೀನ ಬಟ್ಟೆಗಳ ಪರಿಪೂರ್ಣ ಸಂಗ್ರಹವಿದೆ. 30000 ಚದರ ಅಡಿ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತುಗಳ ಹವಾನಿಯಂತ್ರ ಮಳಿಗೆಯಲ್ಲಿ ಎಲ್ಲ ವಯಸ್ಸಿನವರಿಗೆ ಒಪ್ಪುವ ವಸ್ತ್ರಗಳು, ಮದುವೆ ಜವುಳಿಗೆ ಹೆಸರಾಗಿರುವ ಇಲ್ಲಿ ಎಲ್ಲ ಬಗೆಯ ಸೀರೆಗಳು, ಟೆಕ್ಸ್ ಟೈಲ್ಸ್ ಹ್ಯಾಂಡ್‍ಲೂಮ್ಸ್ ರೆಡಿಮೇಡ್ ಉಡುಪುಗಳ ಅಪೂರ್ವ ಸಂಗ್ರಹವಿದೆ. 18 ಕ್ಕೂ ಅಧಿಕ ರಾಜ್ಯಗಳಿಂದ ಸಂಗ್ರಹಿಸಲ್ಪಟ್ಟ ವೈವಿಧ್ಯಮಯ ವಸ್ತ್ರಗಳ ಸಂಗ್ರಹವಿದೆ. ಹಾಗೂ ಎಲ್ಲ ಶಾಖೆಗಳಲ್ಲಿ ಮದುವೆಗೆ ಬೇಕಾಗುವ ವಿಶೇಷ ದರ್ಜೆಯ ರೇಷ್ಮೆ ಸೀರೆಗಳ ಅಪಾರ ಸಂಗ್ರಹವಿದೆ.  

73 ವರ್ಷಗಳಿಂದ ಗ್ರಾಹಕರ ವಿಶ್ವಾಸಗಳಿಸುಲ್ಲಿ ಯಶಸ್ವಿಯಾಗಿರುವ ಸತ್ಯಾ ನಾಥ ಸ್ಟೋರ್ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿಯೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಗ್ರಾಹಕರ ಅನುಕೂಲಕ್ಕಾಗಿ 100 ಕ್ಕೂ ಅಧಿಕ ವಾಹನ ನಿಲುಗಡೆಗೆ ವ್ಯವಸ್ಥೆಯೂ ಇದ್ದು ಗ್ರಾಹಕರಿಗೆ ಶಾಪಿಂಗ್ ನ ಉತ್ತಮ ಅನುಭವ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!