ಕಾಪು: ಸಾಲ ಕೊಡಿಸುವುದಾಗಿ ದಾಖಲೆ ಪಡೆದು ವಂಚನೆ

ಕಾಪು ಮಾ.1(ಉಡುಪಿ ಟೈಮ್ಸ್ ವರದಿ): ಸಾಲ ಕೊಡಿಸುವುದಾಗಿ ಹೇಳಿ ದಾಖಲೆಗಳನ್ನು ಪಡೆದು ವಂಚಿಸಿರುವುದಾಗಿ ಕಾಪುವಿನ ಉಚ್ಚಿಲದ ಮುಮ್ತಾಜ್ ಅವರು ಇಬ್ಬರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಮ್ತಾಜ್ ಅವರು ತಮ್ಮ ಪರಿಚಯದ ಅನ್ವರ್ ಬಳಿ ಸಾಲ ಕೇಳಲು ಆತನ ಕಛೇರಿಯಲ್ಲಿ ಭೇಟಿಯಾಗಿದ್ದು, ಆಗ ಮುಮ್ತಾಜ್ ಅವರು ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, 6 ಫೊಟೋ ನೀಡಿದ್ದರು. ಈ ವೇಳೆ ಅನ್ವರ್  ಸಾಲ ಮಾಡಿಸಿಕೊಡಲು 35,000 ರೂ. ಕೊಡಬೇಕಾಗುತ್ತದೆ ಎಂದು ತಿಳಿಸಿದ್ದ. ಹಾಗೂ ಕೆಲವೊಂದು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದು ಮುಮ್ತಾಜ್ ಅವರಿಂದ 20,000 ರೂ. ಪಡೆದಿದ್ದ. ಇದರ ಜೊತೆಗೆ ಆತನ ಶುಲ್ಕ, ಸಾಲದ ಬಾಬ್ತು ಹಾಗೂ ದಾಖಲೆಗಳ ತಯಾರಿಕೆ ವೆಚ್ಚವೆಂದು 15,000 ರೂ ಪಡೆದಿದ್ದ. ಆದರೆ ಮುಮ್ತಾಜ್ ಅವರ ಖಾತೆಗೆ ಯಾವುದೇ ಸಾಲದ ಹಣ ಜಮೆ ಆಗದೇ ಇದ್ದಾಗ ಈ ಬಗ್ಗೆ ಅನ್ವರ್ ಬಳಿ ಕೇಳಿದಾಗ ನೆಪ ಹೇಳಿ ಮುಂದೂಡುತ್ತಿದ್ದ.

ಈ ನಡುವೆ ಅನ್ವರ್, ಮುಮ್ತಾಜ್ ಅವರ ಬಳಿ ನಿನ್ನ ಚೆಕ್ ನನ್ನ ಬಳಿ ಇದೆ. ಅದು ಈಗ ಬೇರೊಬ್ಬರ ಬಳಿ ಇರುವುದಾಗಿ ತಿಳಿಸಿದ್ದು, ಹೆಚ್ಚುವರಿ ರೂಪಾಯಿ 50,000 ನೀಡಿದಲ್ಲಿ ಮಾತ್ರ ಸಾಲ ನೀಡುವುದಾಗಿ ಹಾಗೂ ಚೆಕ್ಕುಗಳನ್ನು ಹಿಂದೆ ನೀಡುವುದಾಗಿ ತಿಳಿಸಿದ್ದಾನೆ. ಮಾತ್ರವಲ್ಲದೆ ಬಿನಾಜ್ ಹಾಗೂ ಅನ್ವರ್ ನ ಪತ್ನಿ ಮುಮ್ತಾಜ್ ಅವರ ಮನೆಗೆ ಬಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ಮತ್ತೆ 45,000 ಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!