ಫೆ.28-ಮಾ.5 ರ ವರೆಗೆ ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ

ಉಡುಪಿ ಫೆ.28 (ಉಡುಪಿ ಟೈಮ್ಸ್ ವರದಿ): ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಶ್ರೀಮಹಾಗಣಪತಿ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಫೆ.28 ರಿಂದ ಮಾ.5 ರ ವರೆಗೆ ನಡೆಯಲಿದೆ.

ದೇವಸ್ಥಾನದಲ್ಲಿ 6 ದಿನಗಳ ಕಾಲ ವೇದಮೂರ್ತಿ ಚಂದ್ರಕಾಂತ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಹಾಗೂ ಮಾ.3 ರಂದು ವಾರ್ಷಿಕ ಶ್ರೀಮನ್ಮಹಾರಥೋತ್ಸವ ನೆರವೇರಲಿದೆ.

ಮಾ.1 ರಂದು ಬೆಳಿಗ್ಗೆ ಬೆಳಿಗ್ಗೆ ಗಂಟೆ 6 ಗಂಟೆಗೆ ಏಕಾದಶ ರುದ್ರಾಭಿಷೇಕ, 8 ಗಂಟೆಗೆ ಪ್ರಾರ್ಥನೆ, ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಗಣಹೋಮ, ಅಗ್ನಿಜನನ, ನವಕ ಪ್ರಧಾನ ಮಹಾಪೂಜೆ, ಸಂಜೆ 5 ಗಂಟೆಯಿಂದ ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗದ ಪ್ರಾಯೋಜಕತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಉತ್ಸವ ಬಲಿ, ರಂಗಪೂಜೆ, ಭೂತಬಲಿ ಸೇವೆ ನಡೆಯಲಿದೆ.

ಮಾ.2 ರಂದು 8 ಗಂಟೆಗೆ ಗಣಹೋಮ, ನವಕ ಪ್ರಧಾನ ಹೋಮ, 10 ಗಂಟೆಗೆ ಆಶ್ಲೇಷಾಬಲಿ, 12 ಕ್ಕೆ ಮಹಾಪೂಜೆ, ಸಂಜೆ 5 ಕ್ಕೆ ಮೂಡುಸವಾರಿ ಕಟ್ಟೆಪೂಜೆ, ಉತ್ಸವ ಬಲಿ, ದೀಪಾರಾಧನೆ, ಆರಾಧಾನಾ ಬಲಿ ನಡೆಯಲಿದೆ.

ಮಾ.3 ರಂದು ಬೆಳಿಗ್ಗೆ 8 ಕ್ಕೆ ಗಣಹೋಮ ನವಕ ಪ್ರಧಾನ ಹೋಮ, 10 ಕ್ಕೆ ರಥಾಧಿವಾಸ ಹೋಮ ಮಹಾಪೂಜೆ, ರಥಶುದ್ಧಿ, ರಥೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಳ್ಳಿ ಇವರಿಂದ ಯಕ್ಷಗಾನ ನಡೆಯಲಿದೆ. ರಾತ್ರಿ 8ಕ್ಕೆ ಉತ್ಸವ ಬಲಿ, ಮಹಾರಥೋತ್ಸವ, ಭೂತಬಲಿ, ಶಯನೋತ್ಸವ ನಡೆಯಲಿದೆ.

ಮಾ.4 ರಂದು ಬೆಳಿಗ್ಗೆ 8 ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ, ಸಂಜೆ 5 ಕ್ಕೆ ಯಾತ್ರಾಹೋಮ, ಸವಾರಿ ಬಲಿ, ಕಟ್ಟಪೂಜೆ, ಅವಬೃತ ಸ್ನಾನ ರಾತ್ರಿ 11ಕ್ಕೆ ಧ್ವಜಾವರೋಹಣ ಪೂರ್ಣಾಹುತಿ ಹೋಮ ನಡೆಯಲಿದೆ. ಮಾ.5 ರಂದು ಬೆಳಿಗ್ಗೆ 8 ಕ್ಕೆ ಮಹಾಪೂಜೆ ಮಂತ್ರಾಕ್ಷತೆ ನಡೆಯಲಿದ್ದು ಸಂಜೆ 7ಕ್ಕೆ ಗೋ0ದುಲು ಮಾರಿಪೂಜೆ ನಡೆಯಲಿದೆ. ಈ ಎಲ್ಲಾ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಕ್ತರು ಆಗಮಿಸಿ ದೇವರ ಅನುಗ್ರಹ ಪಡೆಯುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹೇಮಂತ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!