ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ‌ ಆಸ್ತಿ ಪರಭಾರೆ- 8 ಮಂದಿಯ ವಿರುದ್ಧ ದೂರು

ಕುಂದಾಪುರ ಫೆ.28 (ಉಡುಪಿ ಟೈಮ್ಸ್ ವರದಿ): ನಕಲಿ ದಾಖಲೆ ಸೃಷ್ಟಿಸಿ‌ ಆಸ್ತಿ ಪರಭಾರೆ ಮಾಡಿಕೊಂಡಿರುವ ಬಗ್ಗೆ ಉಪ್ಪಿನ‌ ಕುದ್ರುವಿನ‌  ಮಧುಕರ ಶೇರೆಗಾರ ಅವರು ರಾಧಾಕೃಷ್ಣ ಶೇರೆಗಾರ ಸೇರಿದಂತೆ 8 ಮಂದಿಯ ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಧುಕರ ಶೇರೆಗಾರ ಅವರ ಅಜ್ಜ ಶಂಕರ ಶೇರೆಗಾರ ಅವರಿಗೆ ಸಂಬಂಧಿಸಿದ ಉಪ್ಪಿನಕುದ್ರುವಿನ 19 ಎಕ್ರೆ ಜಾಗವು ಅವರ ಮರಣಾ ನಂತರ ಮಧುಕರ ಶೇರೆಗಾರ ಅವರಿಗೆ ಸೇರಬೇಕಿದ್ದು, ಈ ಜಾಗವನ್ನು ಅವರಿಗೆ ಯಾವುದೇ ರೀತಿಯ ಸಂಬಂಧಪಡದ ಉಪ್ಪಿನಕುದ್ರುವಿನ ರಾಧಾಕೃಷ್ಣ ಶೇರೆಗಾರ ಎಂಬಾತ ತನ್ನ ಹೆಂಡತಿ ಮಾಲತಿ ಹಾಗೂ ಮಗ ಅಜಿತ್ ಕುಮಾರ್ ಹೆಸರಿಗೆ ಪರಭಾರೆ ಮಾಡಿದ್ದು, ಈ ಕೃತ್ಯಕ್ಕೆ ಇತರ ಆರೋಪಿಗಳಾದ ಉಪ್ಪಿನಕುದ್ರುವಿನ ದೇವರಾಯ ಪೂಜಾರಿ, ಶೇಖರ ಪೂಜಾರಿ, ಆನಂದಭಂಡಾರಿ ಹಾಗೂ ವಕೀಲರಾದ ಕುಂದಾಪುರದ ಅಚ್ಯುತ ಮತ್ತು ಶಂಕರ ಶೇರೆಗಾರ ಇವರನ್ನು ಸಾಕ್ಷೀದಾರರನ್ನಾಗಿಸಿ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿರೋದಾಗಿ ನೀಡಿದ ದೂರಿನಂತೆ  ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!