ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಕದ್ದು ಓಡಿ ಹೋಗುತ್ತಿದ್ದ ಇಬ್ಬರ ಬಂಧನ

ಮಣಿಪಾಲ ಫೆ.26(ಉಡುಪಿ ಟೈಮ್ಸ್ ವರದಿ): ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಚಾರ್ಚ್ ಇಟ್ಟಿದ್ದ ಪನ್ವೇಲಿಯ ಪಿಂಟೋ ಪೌಲ್ ಅವರ ಮೊಬೈಲ್ ನ್ನು ಕಳವು ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಘಟನೆಗೆ ಸಂಬಂಧಿಸಿ ಮೊಬೈಲ್ ಕದ್ದ ಶಹಬುದ್ದೀನ್, ತನ್ವೀರ್ ಅಲಾಮ್ ಎಂಬ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಗಢದ ಪನ್ವೇಲಿಯ ಪಿಂಟೋ ಪೌಲ್ ಅವರು ವ್ಯವಹಾರದ ಕೆಲಸದ ನಿಮಿತ್ತ ನಿನ್ನೆ ರಾತ್ರಿ ಮುಂಬೈನಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟಿದ್ದ ಅವರು ಇಂದು ಬೆಳಿಗ್ಗೆ ಉಡುಪಿ ರೈಲ್ವೇ ನಿಲ್ದಾಣಕ್ಕೆ ಬಂದು ತಲುಪಿದ್ದರು. ಈ ವೇಳೆ ತಮ್ಮ ಮೂಬೈಲ್ ಪೋನ್ ನನ್ನು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಚಾರ್ಜಗೆ ಇಟ್ಟಿದ್ದಾಗ ಇಬ್ಬರು ವ್ಯಕ್ತಿಗಳು ಮೊಬೈಲ್ ನ್ನು ಕಳ್ಳತನ ಮಾಡಿಕೊಂಡು ಓಡಿ ಹೋಗಿದ್ದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರೈಲ್ವೇ ಪೊಲೀಸರು ಆರೋಪಿಗಳನ್ನು ಹಿಡಿದಿದ್ದು, ಕಳವಾದ ಮೊಬೈಲ್ ಪೋನ್ ನ್ನು‌ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!