ಮಂಗಳೂರು: ಫೇಸ್ ಬುಕ್ ಖಾತೆ ಲೈಕ್ ಮಾಡಿದ್ದ ಇಬ್ಬರು ವಶಕ್ಕೆ
ಮಂಗಳೂರು: ಮುಸ್ಲಿಂ ಪೇಜ್ ಫೇಸ್ ಬುಕ್ ಖಾತೆಯಲ್ಲಿ ಹರ್ಷ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದು, ಆ ಪುಟದ ವಿರುದ್ಧ ಮಂಗಳೂರು ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ‘ಮಂಗಳೂರು ಮುಸ್ಲಿಂ’ ಎಂಬ ಫೇಸ್ ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮಣಿಪಾಲದ ಓರ್ವ ಮತ್ತು ಮುಲ್ಕಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಂಗಳೂರು ಮುಸ್ಲಿಂ ಎಂಬ ಖಾತೆಯ ಕುರಿತು ತನಿಖೆ ಮುಂದುವರೆದಿದ್ದು, ಮೂಲವನ್ನು ಪತ್ತೆ ಹಚ್ಚಲಾಗುವುದು. 2016ರಲ್ಲಿ ಮಂಗಳೂರು ಮುಸ್ಲಿಂ ಪೇಜ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದು, ನ್ಯಾಯಾಲಯದ ಆದೇಶದ ಮೂಲಕ ಪುಟವನ್ನು ನಿರ್ಬಂಧಿಸಲಾಗಿತ್ತು. ಈಗ ಈ ಪುಟದ ವರ್ಣಮಾಲೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ, ಅಲ್ಲಿ ಅವರು ಮಂಗಳೂರು ಪದದಿಂದ “ಎ”ಅನ್ನು ತೆಗೆದುಹಾಕಿದ್ದಾರೆ.
ನಲ್ವತ್ತು ಸದಸ್ಯರನ್ನು ಒಳಗೊಂಡ ‘ಮುಸ್ಲಿಂ ಡಿಫೆನ್ಸ್ ಫೋರ್ಸ್’ ಹೆಸರಿನ ವಾಟ್ಸಾಪ್ ಗುಂಪಿನ ಮೇಲೆ ನಿಗಾ ಇರಿಸಿದೆ, ಈ ಗ್ರೂಪ್ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಮತ್ತು ಅವರ ಪೋಷಕರಿಗೆ ಆಕ್ಷೇಪಾರ್ಹ ಪೋಸ್ಟ್ ಮತ್ತು ಸಂದೇಶಗಳ ಮೂಲಕ ಬೆದರಿಕೆ ಹಾಕುತ್ತಿದ್ದರು. ಬುರ್ಖಾ ಧರಿಸಿದ ಮುಸ್ಲಿಂ ಹುಡುಗಿಯರು ಮಾಲ್ ಮತ್ತು ಥಿಯೇಟರ್‌ಗಳಿಗೆ ಸುತ್ತಾಡುವಂತಿಲ್ಲ. ಹೆಣ್ಣುಮಕ್ಕಳ ತಿರುಗಾಡುವುದನ್ನು ಪೋಷಕರು ತಡೆಯಬೇಕು, ಇಲ್ಲದಿದ್ದರೆ ಮಾಲ್‌ಗಳು ಮತ್ತು ಥಿಯೇಟರ್‌ಗಳಲ್ಲಿ ಓಡಾಡುವವರನ್ನು ನಾವು ತಡೆಯಬೇಕಾಗುತ್ತದೆ ಎಂದು ವಾಟ್ಸಪ್ ಪೇಜ್ ಹೇಳಿಕೊಂಡಿದೆ.