ಮೇ 3-10: ಕಡಿಯಾಳಿ ಶ್ರೀಮಹಿಷಮರ್ದಿನಿ  ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ ಫೆ.24 (ಉಡುಪಿ ಟೈಮ್ಸ್ ವರದಿ): ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಉಡುಪಿಯ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು ಮೇ.3 ರಿಂದ ಮೇ.10 ರವರಗೆ  ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದೆ.

8 ದಿನಗಳ ಕಾಲ‌ನಡೆಯಲಿರುವ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಕಡಿಯಾಳಿ ದೇವಸ್ಥಾನದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಈಗಾಲೇ ಬಹುತೇಕ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು, ಮೇ.3 ರಿಂದ ಮೇ.10 ರವರಗೆ  ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಬಗ್ಗೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವ್ಯಸ್ಥಾಪನಾ ಮಂಡಳಿಯ ಅಧ್ಯಕ್ಷ ಡಾ. ರವಿರಾಜ ವಿ. ಆಚಾರ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

2018 ರ ಜ.24 ರಂದು ಆರಂಭಗೊಂಡ ಜೀರ್ಣೋದ್ಧಾರ ಕಾರ್ಯ ಇದೀಗ ಪೂರ್ಣಗೊಂಡಿದ್ದು, ಸುಬ್ರಹ್ಮಣ್ಯ ಗುಡಿ, ನಂದಿಕೋಣ, ರಕ್ತೇಶ್ವರಿ ಗುಡಿಗಳನ್ನು ಶಾಸ್ತ್ರೋಕ್ತವಾಗಿ ವಿಧಿವಿಧಾನಗಳ ಮೂಲಕ ಪೂರ್ಣಗೊಳಿಸಲಾಗಿದೆ. ಇದರೊಂದಿಗೆ 12,000 ಚದರ ಅಡಿ ವಿಸ್ತೀರ್ಣದಲ್ಲಿ ದೇಗುಲದ ಒಳಾಂಗಣ, ಸುತ್ತುಪೌಳಿ, ಒಳಾಂಗಣ ಗ್ರಾನೈಟ್ ಹೊದಿಕೆ, ಹೊರಾಂಗಣ ರಥಬೀದಿ ಕಾಂಕ್ರೀಟೀಕರಣ ಮತ್ತು ಧ್ವಜಸ್ತಂಭ ಮಹಾಬಲಿ ಪೀಠ ಸೇರಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಸಂಪೂರ್ಣ ಶಿಲಾಮಯ ಗೊಳ್ಳಲಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಸಮಗ್ರ ಜೀರ್ಣೋದ್ಧರಕ್ಕೆ ಗ್ರಾಮಸ್ಥರು ಕರ ಸೇವೆ ನೀಡಲು ಸೂಚಿಸಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಈ ವೇಳೆ ಜೀರ್ಣೋದ್ದಾರ ಸಮಿತಿಯ ವೆಬ್ಸೈಟ್ ಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ದೇವಸ್ಥಾನದ ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ, ಉಡುಪಿ ವೆಬ್ ಸಲ್ಯೂಷನ್ಸನ ಶ್ರೀನಿಧಿ ಆಚಾರ್ಯ, ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ವ್ಯವಸ್ಥಾಪನ ಮಂಡಳಿಯ ಸದಸ್ಯರು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸೇವೆ ನೀಡುವವರು ಈ ಕೆಳಗಿನ ಖಾತೆಗೆ ಹಣ ವರ್ಗಾಯಿಸಬಹುದು.
Bank Name: Union Bank of IndiaA/c Name : M/s KADIYALI SRI MAHISHAMSRDINI TEMPLE DEVELOPMENT COMMITTEE A/c No. 000121010000009IFSC CODE: UBIN0900010

Leave a Reply

Your email address will not be published. Required fields are marked *

error: Content is protected !!