ಬೈಂದೂರು: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು
ಬೈಂದೂರು ಫೆ.24(ಉಡುಪಿ ಟೈಮ್ಸ್ ವರದಿ): ನೀರು ಸೇದುತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಬೈಂದೂರಿನ ಪಡುವರಿಯ ನಾಗರತ್ನ ಎಂಬವರು ಮೃತಪಟ್ಟಿದ್ದಾರೆ.
ನಾಗರತ್ನ (35) ಅವರು ಪಡುವರಿ ಗ್ರಾಮದ ಬುಕ್ಕನಪಾಲು, ಜೋಗೂರು ಎಂಬಲ್ಲಿ ತಮ್ಮ ಪತಿ ಸುಬ್ಬಣ್ಣ ರೊಂದಿಗೆ ವಾಸವಾಗಿದ್ದರು. ಎಂದಿನಂತೆ ಇಂದು ಬೆಳಿಗ್ಗೆ ತೋಟಕ್ಕೆ ನೀರುನಿಸಲು ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಬೆಳಿಗ್ಗೆ ತೋಟಕ್ಕೆ ಹೋದವರು ತುಂಬಾ ಸಮಯ ಕಳೆದರೂ ಮನೆಗೆ ವಾಪಸ್ಸು ಬಾರದ್ದನ್ನು ಕಂಡು ನಾಗರತ್ನ ಅವರನ್ನು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೃತರ ಪತಿ ಸುಬ್ಬಣ್ಣ ಶೆಟ್ಟಿ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.