ಕ್ಷಿಪಣಿ ದಾಳಿ ಮುಂದುವರೆಸಿದ ರಷ್ಯಾ- 9 ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು: ಅಪಾರ ಆಸ್ತಿ–ಪಾಸ್ತಿ ನಷ್ಟ
ತನ್ನ ಮಗ್ಗುಲಲ್ಲಿರುವ ಹಾಗೂ ಧಾನ್ಯ, ಸಸ್ಯ ಸಮೃದ್ಧಿಯ ಉಕ್ರೇನ್ ಮೇಲೆ ಹಿಡಿತ ಸಾಧಿಸಬೇಕು ಎಂದು ಪಣ ತೊಟ್ಟಿರುವ ರಷ್ಯಾ, ಅಂತೂ ಉಕ್ರೇನ್ ಮೇಲೆರಗಿದೆ. ಈ ವಿದ್ಯಮಾನ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿ ಬಿಡಬಹುದೇ? ಎಂದು ಅನೇಕ ಜಾಗತಿಕ ನಾಯಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಮೇಲೆ ಗುರುವಾರ ಬೆಳಗಿನ ಜಾವ ಸುಮಾರು 1 ಲಕ್ಷ ರಷ್ಯಾ ಸೈನಿಕರು ಉಕ್ರೇನ್ ಗಡಿಯನ್ನು ಮುತ್ತಿಗೆ ಹಾಕಿದ್ದಾರೆ. ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ (ಕೀವ್, ಕಾರ್‌ಕೀವ್) ಕ್ಷಿಪಣಿ ದಾಳಿಗಳನ್ನು ರಷ್ಯಾ ಮುಂದುವರೆಸಿದ್ದು, 9 ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ. ಹಲವಾರು ಸಾವು–ನೋವು, ಆಸ್ತಿ–ಪಾಸ್ತಿ ನಷ್ಟವಾಗಿದೆ.
ಉಕ್ರೇನ್‌ನಿಂದ ವಿಶೇಷ ವಿಮಾನಗಳ ಹಾರಾಟ ರದ್ದು: ಭಾರತೀಯ ರಾಯಭಾರಿ ಕಚೇರಿ ಈ ಎರಡೂ ದೇಶಗಳ ಸೇನಾ ಶಕ್ತಿಯನ್ನು ಹೋಲಿಸಿ ನೋಡುವುದಾದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಅದಾಗ್ಯೂ ಕೂಡ ರಷ್ಯಾವನ್ನು ಒಂದು ಕೈ ನೋಡೇ ಬಿಡೋಣ ಎಂದು ಉಕ್ರೇನ್ ಪ್ರತಿದಾಳಿ ನಡೆಸುತ್ತಿದೆ.
ರಷ್ಯಾದ ಎಲ್ಲ ಸೇನಾ ವಿಭಾಗದಲ್ಲಿ 8.50 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದರೇ, ಉಕ್ರೇನ್ ಕೇವಲ 2.50 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದೆ. ರಷ್ಯಾದಲ್ಲಿ 12,500 ಸೇನಾ ಟ್ಯಾಂಕ್‌ಗಳು ಇದ್ದರೇ, ಉಕ್ರೇನ್ ಕೇವಲ 2,600 ಸೇನಾ ಟ್ಯಾಂಕ್‌ಗಳನ್ನು ಹೊಂದಿದೆ. 30,000 ಕ್ಕೂ ಅಧಿಕ ಸಶಸ್ತ್ರ ವಾಹನಗಳನ್ನು ರಷ್ಯಾ ಹೊಂದಿದ್ದರೇ, ಉಕ್ರೇನ್ 12,000 ಸಶಸ್ತ್ರ ವಾಹನಗಳನ್ನು ಮಾತ್ರ ಹೊಂದಿದೆ.
ರಷ್ಯಾ ಬಳಿ 14,000 ಕ್ಕೂ ಅಧಿಕ ಫಿರಂಗಿಗಳಿದ್ದರೇ, ಉಕ್ರೇನ್ ಬಳಿ ಕೇವಲ 3,000 ಫಿರಂಗಿಗಳಿವೆ. ರಷ್ಯಾ – ಉಕ್ರೇನ್ ಸಂಘರ್ಷ| ಮೋದಿ ಮಧ್ಯಪ್ರವೇಶ ಮಾಡಲಿ: ಉಕ್ರೇನ್ ರಾಯಭಾರಿ ಮನವಿ.
600ಕ್ಕೂ ಅಧಿಕ ಬೃಹತ್ ನೌಕಾ ವಾಹನಗಳನ್ನು ರಷ್ಯಾ ಹೊಂದಿದೆ. ಕೇವಲ 30 ಬೃಹತ್ ನೌಕಾ ವಾಹನಗಳನ್ನು ಉಕ್ರೇನ್ ಹೊಂದಿದೆ. 70 ಬೃಹತ್ ಜಲಾಂತರ್ಗಾಮಿಗಳು ರಷ್ಯಾ ಬಳಿ ಇವೆ. ಆದರೆ, ಉಕ್ರೇನ್ ಬಳಿ ರಷ್ಯಾ ಹೊಂದಿರುವಂತಹ ಶಕ್ತಿಶಾಲಿ ಜಲಾಂತರ್ಗಾಮಿ ಒಂದೂ ಕೂಡ ಇಲ್ಲ. ಇನ್ನು 4,100 ಯುದ್ಧ ವಿಮಾನಗಳು ರಷ್ಯಾ ಬಳಿ ಇವೆ. ಇದರಲ್ಲಿ 722 ಫೈಟರ್ ಜೆಟ್‌ಗಳಾಗಿವೆ. ಆದರೆ, 318 ಯುದ್ಧ ವಿಮಾನಗಳಲ್ಲಿ 69 ಪೈಟರ್ ಜಟ್‌ಗಳನ್ನು ಮಾತ್ರ ಉಕ್ರೇನ್ ಹೊಂದಿದೆ.
ಇನ್ನೊಂದು ವಿಶೇಷವೆಂದರೆ ರಷ್ಯಾ ವಾರ್ಷಿಕವಾಗಿ (2020 ರ ಮಾಹಿತಿ) 67.7 ಬಿಲಿಯನ್ ಯುಎಸ್ ಡಾಲರ್ ರಕ್ಷಣಾ ವಲಯಕ್ಕೆ ಖರ್ಚು ಮಾಡಿದರೆ ಉಕ್ರೇನ್ ಕೇವಲ 5.9 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡುತ್ತದೆ.
ಇನ್ನೊಂದೆಡೆ ಐರೋಪ್ಯ ಒಕ್ಕೂಟ ಉಕ್ರೇನ್ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ರಷ್ಯಾದ ಸೇನಾ ಬಲದ ಮುಂದೆ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸೇನಾ ಬಲವೂ ಕಡಿಮೆಯೇ ಎಂದು ತಜ್ಞರು ಹೇಳುತ್ತಾರೆ.