ಹಿಂದೂ ಹಿಂದುತ್ವ ಅಂದಿದಕ್ಕೆ ಹರ್ಷ ಈ ಸ್ಥಿತಿಯಲ್ಲಿ ಬಿದ್ದಿದ್ದಾನೆ- ಸಹೋದರಿಯ ಅಳಲು
ಬೆಂಗಳೂರು ಫೆ.22: ಹಿಂದೂ ಹಿಂದುತ್ವ ಅಂದಿದಕ್ಕೆ ನನ್ನ ತಮ್ಮ ಇವತ್ತು ಆ ಸ್ಥಿತಿಯಲ್ಲಿ ಬಿದ್ದಿದ್ದಾನೆ’ ಎಂದು ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಹರ್ಷ ಅವರ ಸಹೋದರಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದೀಗ ಸಹೋದರಿಯು ತಮ್ಮನ ಹತ್ಯೆ ಕುರಿತು ಮಾದ್ಯಮದ ಜೊತೆಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ”ಹಿಂದುತ್ವ ಹಿಂದೂ ಹಿಂದುತ್ವ ಅಂದಿದಕ್ಕೆ ಇವತ್ತು ಆ ಸ್ಥಿತಿ ಅಲ್ಲಿ ಬಿದ್ದಿದ್ದಾನೆ ನನ್ನ ತಮ್ಮ ದಯವಿಟ್ಟು ಎಲ್ಲರೂ ಒಂದು ಸಲ ನೋಡಿ, ಎಲ್ಲ ನನ್ನ ಅಣ್ಣ ತಮ್ಮಂದಿರಿಗೂ ಕೈ ಮುಗಿದು ಬೇಡ್ಕೋತೀನಿ, ಮಸ್ಲಿಮರಿಗೂ ಬೇಡ್ಕೋತೀನಿ ಹಿಂದೂ ಅವರಿಗೂ ಬೇಡ್ಕೋತೀನಿ ನಿಮ್ಮ ಅಪ್ಪ-ಅಮ್ಮಂದಿರಿಗೆ ಒಳ್ಳೆಯ ಮಕ್ಕಳಾಗಿರಿ ಹೊರತು ಇದೆಲ್ಲ ಮಾಡೋದಕ್ಕೆ ಹೋಗಬೇಡಿ” ಎಂದು ಕೇಳಿಕೊಂಡಿದ್ದಾರೆ.
ರವಿವಾರ ರಾತ್ರಿ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತ ಹರ್ಷ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಮಾಡಿದ್ದರು.