ಉಡುಪಿ: ಆಸ್ತಿ ವಿಚಾರಕ್ಕಾಗಿ ದಂಪತಿಗೆ ಮನೆಗೆ ನುಗ್ಗಿ ಹಲ್ಲೆ
ಉಡುಪಿ ಫೆ.21(ಉಡುಪಿ ಟೈಮ್ಸ್ ವರದಿ): ಆಸ್ತಿ ವಿಚಾರಕ್ಕಾಗಿ ಗಂಡನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಪುತ್ತೂರಿನ ಕೊಡಂಕೂರು ನಿವಾಸಿ ಮಮತ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಫೆ.20 ರಂದು ಮಮತ ಅವರ ಗಂಡ ರಾಜೇಂದ್ರ ಅವರ ಸಂಬಂಧಿಕರಾದ ಗೋಪಾಲ, ಅಶೋಕ, ಅರುಣ, ಆಶಾ ಹಾಗೂ ಇತರರು ಮನೆಗೆ ಬಂದು ಆಸ್ತಿ ವಿಚಾರಕ್ಕಾಗಿ ಒಟ್ಟು ಸೇರಿ ಏಕಾಏಕಿ ಮಮತ ಹಾಗೂ ಅವರ ಗಂಡನಿಗೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.