ಬ್ರಹ್ಮಾವರ: ದೈವಸ್ಧಾನಕ್ಕೆ ನುಗ್ಗಿ ಕಳವು
ಬ್ರಹ್ಮಾವರ ಫೆ.21(ಉಡುಪಿ ಟೈಮ್ಸ್ ವರದಿ): ಹಾವಂಜೆ ಗ್ರಾಮದ ಗೋಳಿಕಟ್ಟೆ ಜಂಕ್ಷನನಲ್ಲಿರುವ ಶ್ರೀವೀರ ಕಲ್ಕುಡ ದೈವಸ್ಧಾನಕ್ಕೆ ನುಗ್ಗಿದ ಕಳ್ಳರು 65,000. ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಫೆ.20 ರಂದು ದೈವಸ್ದಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಲ್ಕುಡ ದೈವದ ಓಟ್ಟು 65,000 ರೂ. ಮೌಲ್ಯದ ಸ್ವತ್ತನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.