‘ಹಿಜಾಬ್ -ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರವೇ? ಆನ್‌ಲೈನ್ ಚರ್ಚಾಕೂಟ

ಬೆಂಗಳೂರು ಫೆ.21: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಹಿಜಾಬ್ – ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರವೇ?’ ಎಂಬ ವಿಚಾರದ ಕುರಿತು ಆನ್‌ಲೈನ್ ವಿಶೇಷ ಚರ್ಚಾಕೂಟ ನಡೆದಿದೆ.

ಈ ಚರ್ಚಾ ಕೂಟದಲ್ಲಿ ಮಾತನಾಡಿದ ಉದ್ಯಮಿಗಳು ಹಾಗೂ ಚಲನಚಿತ್ರ ವಿತರಕ ಪ್ರಶಾಂತ ಸಂಬರ್ಗಿ ಅವರು ಮಾತನಾಡಿ, ಹಿಜಾಬ್‌ನ ಸಂಘರ್ಷವು  ‘ಜೀನ್ ಶಾರ್ಪ್ ಥಿಯರಿ’ಯ ಆಧಾರದಲ್ಲಿ ಒಂದು ವ್ಯವಸ್ಥಿತವಾದ ಷಡ್ಯಂತ್ರದ ರೂಪದಲ್ಲಿ ನಡೆಯುತ್ತಿದೆ ಎಂದರು. ಅಮೇರಿಕಾದ ಓರ್ವ ಸಮಾಜಶಾಸ್ತ್ರದ ಪ್ರಾಧ್ಯಾಪಕನ ಜೀನ್ ಶಾರ್ಪ್ ಥಿಯರಿಯಲ್ಲಿ, ಧರಣಿ ಕೂರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವುದು, ಮಾಧ್ಯಮಗಳ ಮುಖಾಂತರ ಅಲ್ಲಿನ ವಿಧಾನ ಸಭೆಯಲ್ಲಿ ಚರ್ಚೆಯಾಗುವಂತೆ ಮಾಡುವುದು ಹಾಗೂ ಕೊನೆಯಲ್ಲಿ ಪ್ರಕರಣವನ್ನು ಕೋರ್ಟ್‌ ಗೆ ತೆಗೆದುಕೊಂಡು ಹೋಗುವುದು ಹೀಗೆ 4 ಹಂತಗಳಿವೆ. ಪ್ರಸ್ತುತ ಹಿಜಾಬ್ ನ ಸಂಘರ್ಷವೂ ಇದೇ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದೇ ಚರ್ಚಾ ಕೂಟದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸೌ. ಶುಭಾವತಿ ಬಿ. ನಾಯ್ಕ್ ಅವರು ಮಾತನಾಡಿ, ಸಂವಿಧಾನದ ಕಲಂ 25 ರಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ, ಆರೋಗ್ಯ ಹಾಗೂ ನೈತಿಕತೆಗೆ ಮತ್ತು ಅದರ ಉಪಬಂಧಗಳಿಗೆ ಯಾವುದೇ ತೊಂದರೆಯಾಗದೇ ತಮ್ಮ ಮೂಲಭೂತ‌ ಹಕ್ಕುಗಳನ್ನು ಚಲಾಯಿಸಬೇಕು ಎಂದು ಹೇಳಲಾಗಿದೆ. ಈ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ಮನಬಂದಂತೆ ವರ್ತಿಸುತ್ತಿದ್ದಾರೆ.

144 ಸೆಕ್ಷನ್ ಜಾರಿಯಾಗಿರುವಾಗಲೂ ಸ್ಟ್ರೈಕ್, ಗಲಾಟೆ ಮಾಡುತ್ತಾರೆ. ಇದು ಕಾನೂನು ಉಲ್ಲಂಘನೆ ಅಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಹಾಗೂ ಇವರು ಮೂಲಭೂತ ಕರ್ತವ್ಯಗಳನ್ನು ಪಾಲಿಸದೇ, ಇವರಿಗೆ ಲಾಭವಾಗುವ ಧಾರ್ಮಿಕ ಹಕ್ಕಿನ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು. ಈ ವೇಳೆ ವಿಶ್ವ ಸನಾತನ ಪರಿಷದ್ ನ ಅಧ್ಯಕ್ಷರಾದ ಎಸ್ ಭಾಸ್ಕರನ್ ಅವರು ಮಾತನಾಡಿ, ಇಂದು ಹಿಜಾಬ್ ಕೇಳುವವರು ನಾಳೆ ನಮ್ಮ ಕುರಾನ್‌ ನಲ್ಲಿ ದಿನಕ್ಕೆ 5ಬಾರಿ ನಮಾಜ್ ಮಾಡಲು ಹೇಳಿದ್ದಾರೆ ಎಂದು ಆಗ್ರಹಿಸುತ್ತಾರೆ. ಇದಕ್ಕೆ ಅವರಿಗಾಗಿ ಪ್ರತ್ಯೇಕ ನಮಾಜ್ ಸ್ಥಳ ಮಾಡಿಕೊಡಲು ಸಾಧ್ಯವಿದೆಯೇ? ಎಂದು ಪ್ರಶ್ನೆ ಕೇಳಿದ್ದಾರೆ. ಹಾಗೂ ಮುಂದೆ ನಾವು ಹರಾಮ್ ಪದಾರ್ಥ ತಿನ್ನುವಂತಿಲ್ಲ ಹಾಗಾಗಿ ಕಾಲೇಜು ಕ್ಯಾಂಟೀನ್‌ನಲ್ಲಿ ನಮಗೆ ಹಲಾಲ್ ಪ್ರಮಾಣೀಕೃತ ಆಹಾರ ನೀಡಬೇಕು ಎನ್ನುತ್ತಾರೆ. ನಂತರ ನಮಗೆ ರವಿವಾರದ ರಜೆ ಬೇಡ ಶುಕ್ರವಾರವೇ ರಜೆ ಬೇಕು ಎಂದು ಕೇಳುತ್ತಾರೆ ಹೀಗೆ ಅವರು ನಮ್ಮ ಭಾರತವನ್ನು ಇಸ್ಲಾಮಿನ ಕಡೆಗೆ ಕರೆದೊಯ್ಯಲು ಇಚ್ಛಿಸುತ್ತಿದ್ದಾರೆ ಎಂದರು

ಈ ಚರ್ಚೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಅವರು ಮಾತನಾಡಿ, ಈ ಎಲ್ಲ ಸ್ಥಿತಿಗಳನ್ನು ನೋಡುವಾಗ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವ ಷಡ್ಯಂತ್ರ ಬಯಲಾಗುತ್ತಿದೆ. ಇದಕ್ಕೆ ಮುಂದಿನ ಉಪಾಯವೆಂದರೆ ಹಿಂದೂಗಳು‌ ಜಾಗೃತರಾಗುವುದು ಮತ್ತು ಸಂಘಟಿತರಾಗುವುದು. ಹಾಗಾಗಿ ಈ ಎಲ್ಲ ಸಮಸ್ಯೆಗಳಿಗೆ ಒಂದೇಉತ್ತರವೆಂದರೆ ‘ಹಿಂದೂ ರಾಷ್ಟ್ರ’ವಾಗಿದೆ. ಅದಕ್ಕಾಗಿ ಎಲ್ಲ ಸಂಘಟನೆಗಳು ಮತ್ತು ಹಿಂದುತ್ವನಿಷ್ಠರು ಮನಸ್ಸಿನಿಂದ ಒಂದಾಗಬೇಕಿದೆ ಮತ್ತು ರಾಷ್ಟ್ರ ರಕ್ಷಣೆಗಾಗಿಸಮಯವನ್ನು ನೀಡಬೇಕಿದೆ ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!