ಬಜರಂಗ ದಳದ ಕಾರ್ಯಕರ್ತನ ಹತ್ಯೆ: ಇಬ್ಬರು ಆರೋಪಿಗಳ ಬಂಧಿಸಿದ ವಿಶೇಷ ತನಿಖಾ ತಂಡ
ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತನಾದ ಹರ್ಷ ಹತ್ಯೆಯ ಇಬ್ಬರು ಆರೋಪಿಗಳನ್ನು 24 ತಾಸುಗಳ ಒಳಗೆ ಶಿವಮೊಗ್ಗ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡ ಬಂಧಿಸಿದೆ.
ಶಿವಮೊಗ್ಗ ಬುದ್ಧ ನಗರದ ಖಾಸಿಫ್ (30), ಜೆಪಿ ನಗರ ಸೈಯ್ಯದ್ ನಧೀಂ (20) ಬಂಧಿತ ಆರೋಪಿಗಳು.
ಆರೋಪಿಗಳ ಪತ್ತೆಗೆ ಡಿಎಸ್‌ಪಿಗಳ ನೆತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಕೊಲೆಯ ನಂತರ ರಾತ್ರಿ ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಹೋಗಿದ್ದರು. ಅಲ್ಲಿಗೆ ತೆರಳಿದ ವಿಶೇಷ ತನಿಖಾ ತಂಡ ಇಬ್ಬರನ್ನು ಬಂಧಿಸಿದೆ. ಉಳಿದ ಇಬ್ಬರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಎಡಿಜಿಪಿ ಎಸ್.ಮುರುಗನ್ ಮಾಧ್ಯಮಗಳಿಗೆ ತಿಳಿಸಿದರು