ಉಡುಪಿ: ವೇತನ ಬಾಕಿ ಮತ್ತೆ ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಪ್ರತಿಭಟನೆ
ಉಡುಪಿ ಫೆ.21: ವೇತನ ಬಾಕಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ಇಂದು ಬಿ.ಆರ್.ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ವಂದಿಗಳು ಮತ್ತೆ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ನೀತಾ ಶೆಟ್ಟಿ ಮಾತನಾಡಿ, ನಮಗೆ ಸರಿಯಾದ ಸಮಯಕ್ಕೆ ವೇತನ ನೀಡಿದರೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ದೇಶದಲ್ಲೇ ಮಾದರಿ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತೇವೆ. ಆದರೆ ನಮಗೆ ಈಗ ಆಸ್ಪತ್ರೆಗೆ ಕೆಲಸಕ್ಕೆ ಬರಲು ಬಸ್ಸಿಗೆ ನೀಡಲೂ ಹಣ ಇಲ್ಲದಂತಾಗಿದೆ. 15 ದಿನಗಳ ದಿಂದೆ ಈ ಬಗ್ಗೆ ಸಂಬಂಧ ಪಟ್ಟ ಎಲ್ಲರಿಗೂ ಮಾಹಿತಿ ನೀದ್ದೇವೆ. ಶಾಸಕರು ಹಾಗೂ ಆಡಳಿತ ಮಂಡಳಿ ನೀಡಿದ ಭರವಸೆಗೆ ಗೌರವ ನೀಡಿ ಕೆಲಸ ಮಾಡಿದ್ದೇವು ಆದರೆ ಈಗ ಯಾರೂ ಸ್ಪಂದಿಸುತ್ತಿಲ್ಲ. ಈ ಹಿಂದೆ ಕೇಳಿದಾಗ ಸಿಬ್ಬಂದಿಗಳ ವೇತನ ಕ್ಲಿಯರೆನ್ಸ್ ಮಾಡಿ ಕಳಿಸುತ್ತೇವೆ ಎಂದು ಹೇಳಿತ್ತಾರೆ ಆದರೆ ಅದರ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗೂ ಮುಂದಿನ ದಿನಗಳಲ್ಲಿ ವೇತನ ಪಾವತಿಯಾಗುವ ಕುರಿತು ನಮಗೆ ಸ್ಪಷತೆ ಬೇಕು ಎಂದು ಕೇಳಿಕೊಂಡರು.
ಜಿಲ್ಲಾ ಸರ್ಜನ್ ರನ್ನು ಕೇಳಿದರೆ ಆಡಳಿತ ಮಂಡಳಿ ಕೇಳಿ ಅಂತಾರೆ. ಆಡಳಿತ ಮಂಡಳಿ ಕೇಳಿದರೆ ಡಿಎಸ್ ಅವರನ್ನು ಕೇಳಿ ಅಂತಾರೆ ಈಗ ನಾವು ಯಾರ ಬಳಿ ಕೇಳುವುದು ಅಂತ ಗೊತ್ತಾಗುತ್ತಿಲ್ಲ. ಶಾಸಕರು ನೀಡಿದ ಭರವಸೆಯಂತೆ ಈಡೇರಿಲ್ಲ. ಮೂರು ತಿಂಗಳಿನಿಂದ ವೇತನ ಪಾವತಿ ಯಾಗದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಸಮಸ್ಯೆಯಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಆಸ್ಪತ್ರೆಯ ನಿರ್ವಾಹನ ವ್ಯವಸ್ಥಾಪಕ ಪ್ರಕಾಶ್ ಅವರು ಮಾತನಾಡಿ , ನವೆಂಬರ್ ನಿಂದ ಜನವರಿ ವರೆಗಿನ ವೇತನ ಬಾಕಿ ಇರುವ ಕಾರಣ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆಡಳಿತ ಮಂಡಳಿ ಗೆ ಮಾಹಿತಿ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ. ಸರಕಾರಕ್ಕೆ ಹಸ್ತಾಂತರ ಮಾಡಿದ್ದೇವೆ ಸರಕಾರ ಕೇಳಿ ಎನ್ನುತ್ತಿದ್ದಾರೆ. ಈ ಹಿಂದೆ ಶಾಸಕರೂ ಆಯುಷ್ ಮಾನ್ ಸ್ಕೀಮ್ ನಡಿಯಲ್ಲಿ 65 ಲಕ್ಷ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಅದು ಬಿಡುಗಡೆ ಮಾಡಿದರೆ ನಮಗೆ ಎರಡು ತಿಂಗಳ ವೇತನ ಸಿಗುತ್ತದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗಾಗಿ ಇಂದಿನಿಂದ ತುರ್ತು ಸೇವೆ ಹೊರತು ಪಡಿಸಿ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ಹಾಗೂ ದಾಖಲಾಗಿದ್ದ ರೋಗಿಗಳನ್ನು ಡಿಶ್ಚಾರ್ಜ್ ಮಾಡಿಸಿದ್ದೇವೆ ನಿತ್ಯದ ಆರೋಗ್ಯ ತಪಾಸಣೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದರು.
ಇದೇ ವೇಳೆ ಮಡಮಕ್ಕಿ ಯಕ್ಷಗಾನ ಕಲಾವಿದ ಸುಧೀಂದ್ರ ಆರ್ಚಾಯ ಅವರ ತಮ್ಮ ಪತ್ನಿಯನ್ನು ಪರೀಕ್ಷೆಗೆ ಕರೆದುಕೊಂಡು ಬಂದಿದ್ದು. ಅವರು ಮಾಧ್ಯಮ ಜೊತೆ ಮಾತನಾಡಿ,ಬೇರೆ ಆಸ್ಪತ್ರೆಗೆ ಹೋಗಬೇಕಾದರೂ ಇಲ್ಲಿಯ ರಿಪೋರ್ಟ್ ಬೇಕು ಅದು ಇಲ್ಲದೆ ಆಗುವುದಿಲ್ಲ. ಇದು ಎರಡು ಜೀವದ ಪ್ರಶ್ನೆ ಆಗಿರುವುದರಿಂದ ಇದು ಸಾಮಾನ್ಯ ಸಮಸ್ಯೆ ಅಲ್ಲ. ರಿಪೋರ್ಟ್ ನೀಡಿದರೆ ಬೇರೆ ಕಡೆ ಹೋಗುತ್ತೇವೆ. ಆದರೆ ಇಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ನಮಗೂ ಸಮಸ್ಯೆಯಾಗಿದೆ ಎನ್ನುತ್ತಾರೆ.
ನವೆಂಬರ್ ನಿಂದ 3 ತಿಂಗಳ ವೇತನ ವಾಕಿ ಹಿನ್ನೆಲೆಯಲ್ಲಿ ಬಾಕಿ ವೇತನವನ್ನು ಪಾವತಿಸುವಂತೆ ಆಗ್ರಹಿಸಿ ಇಂದು ಆಸ್ಪತ್ರೆಯ ಎದುರು ಆಸ್ಪತ್ರೆಯ ನರ್ಸ್, ರಿಶಪ್ಶನಿಸ್ಟ್, ಸ್ವಚ್ಚತಾ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಸಿಬ್ಬಂದಿಗಳು ಸೇರಿ 153 ಮಂದಿ ಸಿಬ್ಬಂದಿಗಳು ಧರಣಿ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದಾಗ ಜನಪ್ರತಿನಿಧಿಗಳ ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಟ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಮತ್ತೆ ಅದೇ ಸಮಸ್ಯೆ ತಲೆದೂರಿದ್ದು ಮತ್ತೆ ಆಸ್ಪತ್ರೆಯ ಎದುರು ಸಿಬ್ಬಂದಿಗಳು ಧರಣಿ ಕೂತು ತಮ್ಮ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸುತ್ತಿದ್ದಾರೆ.