ಬಿರಿಯಾನಿ, ಜ್ಯೂಸ್ ಕುಡಿಯೋದೆ ಮೇಕೆದಾಟು ಪಾದಯಾತ್ರೆ: ಎಚ್‌ಡಿಕೆ

ರಾಮನಗರ, ಫೆ 20: ಜನರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಪಾದಯಾತ್ರೆ ಮಾಡಿದರೆ ಆಗಬಹುದು, ಆದರೆ ದಿನಾ ಬಿರಿಯಾನಿ ಊಟ, ಎರಡು ಗಂಟೆಗೊಮ್ಮೆ ಬಾಳೇಕಾಯಿ ಬಜ್ಜಿ, ಜ್ಯೂಸ್ ಕುಡಿದುಕೊಂಡು ಇದ್ಯಾವ ಯಾತ್ರೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯಿಂದ ಸಮಸ್ಯೆ ಬಗೆಹರಿಯುತ್ತೆ ಎನ್ನುವುದಾದರೆ ನಾನು ಕೂಡಾ ಕಾಂಗ್ರೆಸ್ ನಾಯಕರ ಜೊತೆ ಪಾದಯಾತ್ರೆ ಮಾಡಲು ಸಿದ್ದ. ನನ್ನ ಕರ್ಮಭೂಮಿಯಲ್ಲಿ ಯಾತ್ರೆ ನಡೆಸಿದರೆ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎನ್ನುವುದಾದರೆ ಅದು ಅವರ ಭ್ರಮೆ ಎಂದರುಇನ್ನು ರಾಮನಗರದ ಜನತೆಯ ಪ್ರೀತಿ ಇರುವವರೆಗೆ ಇವರು ಯಾರೂ ನನ್ನನ್ನು ಅಲ್ಲಾಡಿಸಲು ಆಗುವುದಿಲ್ಲ. ಇಂತಹ ಹತ್ತು ಪಾದಯಾತ್ರೆಯನ್ನು ಮಾಡಿದರೂ, ಇಲ್ಲಿನ ಜನ ನನ್ನ ಕೈಬಿಡುವುದಿಲ್ಲ ಎಂದಿದ್ದಾರೆ.ಜನರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಪಾದಯಾತ್ರೆ ಮಾಡಿದರೆ ಓಕೆ, ದಿನಾ ಬಿರಿಯಾನಿ ಊಟ, ಎರಡು ಗಂಟೆಗೊಮ್ಮೆ ಬಾಳೇಕಾಯಿ ಬಜ್ಜಿ, ಜ್ಯೂಸ್ ಕುಡಿದುಕೊಂಡು, ಇದ್ಯಾವ ಯಾತ್ರೆ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!