ಶಂಕರನಾರಾಯಣ: ಕಾರು ಹತ್ತಿಸಿ ಕೊಲೆ ಯತ್ನ
ಶಂಕರನಾರಾಯಣ ಫೆ.20(ಉಡುಪಿ ಟೈಮ್ಸ್ ವರದಿ): ಹೊಸಂಗಡಿಯ ರವಿ ಶೆಟ್ಟಿ ಎಂಬವರ ಮೇಲೆ ವಾಹನ ಹರಿಸಿ ಕೊಲೆಗೆ ಯತ್ನಿಸಿರುವುದಾಗಿ ದೇವಿ ಪ್ರಸಾದ್ ಶೆಟ್ಟ ಎಂಬವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಫೆ.18 ರಂದು ರವಿ ಶೆಟ್ಟಿ ಅವರು ತಮ್ಮ ಬೈಕ್’ನಲ್ಲಿ ಸಿದ್ದಾಪುರ ಗ್ರಾಮದ ನೀರಾವರಿ ಕಛೇರಿ ಎದುರುಗಡೆ ಹೋಗುತ್ತಿದ್ದಾಗ ಅರೋಪಿ ದೇವಿ ಪ್ರಸಾದ್ ಶೆಟ್ಟಿ ಕಾರಿನಲ್ಲಿ ಬೆನ್ನಟ್ಟಿ ಬಂದು ಕೊಲ್ಲುವ ಉದ್ದೇಶದಿಂದ ಕಾರನ್ನು ಮೇಲೆ ಹತ್ತಿಸಲು ಮುಂದಾಗಿದ್ದಾನೆ. ಬಳಿಕ ಸಣ್ಣ ಹೊಳೆ ಎಂಬಲ್ಲಿ ಕೂಡ ಇದೇ ರೀತಿ ಕಾರನ್ನು ಹತ್ತಿಸಲು ಪ್ರಯತ್ನಿಸಿದ್ದು, ಮತ್ತಿಬೇರು ಎಂಬಲ್ಲಿ ರವಿ ಅವರ ವಾಹನ ತಡೆದಾಗ ರವಿ ಶೆಟ್ಟಿ ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ಈ ಹಿಂದೆ ದೇವಿಪ್ರಸಾದ್ ಶೆಟ್ಟಿ ಕೊಳವೆ ಬಾವಿಗೆ ಅಕ್ರಮವಾಗಿ ಎನ್ ಒಸಿ ಪಡೆದು ವಿದ್ಯುತ್ ಸಂಪರ್ಕ ಮಾಡುವ ಬಗ್ಗೆ ಹೊಸಂಗಡಿ ಪಂಚಾಯತ್’ಗೆ ಅರ್ಜಿ ನೀಡಿದನ್ನು ನೀರಾಕರಿಸಿದ್ದು, ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿದ್ದನ್ನು ಮೇಸ್ಕಾಂ ಇಲಾಖೆ ತೆರವು ಮಾಡಿದ್ದಾರೆ. ಇದನ್ನು ರವಿ ಶೆಟ್ಟಿ ಅವರೇ ಮಾಡಿದ್ದಾರೆ ಎಂದುಕೊಂಡು, ರವಿ ಶೆಟ್ಟಿ ಅವರ ಮೇಲೆ ಕಾರನ್ನು ಹಾರಿಸಿ ಕೊಲ್ಲಲು ಯತ್ನಿಸಿರುವುದಾಗಿ ನೀಡಿದ ದೂರಿನಂತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.