ಸಮಾಜದಲ್ಲಿ ಶಾಂತಿ ಇಲ್ಲದಿದ್ದರೆ ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸಿ ಏನು ಪ್ರಯೋಜನ- ನ್ಯಾ.ಎಸ್ ಅಬ್ದುಲ್ ನಝೀರ್

ಉಡುಪಿ ಫೆ.19(ಉಡುಪಿ ಟೈಮ್ಸ್ ವರದಿ): ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಕಟ್ಟಡದ 3ನೇ ಮಹಡಿ, ನೂತನವಾಗಿ ಸೃಜಿಸಲ್ಪಟ್ಟ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿ. ಸಿ. ಕ್ಯಾಬಿನ್ ಉದ್ಘಾಟನಾ ಸಮಾರಂಭ ಇಂದು ನಡೆಯಿತು.

ಕಾರ್ಯಕ್ರಮ ವನ್ನು ನವದೆಹಲಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್ ಅಬ್ದುಲ್ ನಝೀರ್  ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ನ್ಯಾಯವಾದಿಗಳು ಜನರಿಗೆ ತ್ವರಿತ ಮತ್ತು ಕಡಿಮೆ ಖರ್ಚಿನಲ್ಲಿ  ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿ ಕರ್ನಾಟಕ ಉತ್ತನ ನ್ಯಾಯಾಂಗ ಮೂಲ ಸೌಕರ್ಯ ಹೊಂದಿರುವ ರಾಜ್ಯವಾಗಿದೆ ಎಂದ ಅವರು, ಇದೇ ವೇಳೆ ಸರಕಾರ ನ್ಯಾಯಾಂಗ ವ್ಯವಸ್ಥೆ ಗೆ ಬೇಕಾದ ಎಲ್ಲಾ ಸೌಕರ್ಯ ಗಳನ್ನು ನೀಡುತ್ತಿದೆ.ಮಂಗಳೂರು ಉಡುಪಿಯ ವಕೀಲರು ಸುಪ್ರೀಂ ಕೋರ್ಟಿನ ತೀರ್ಪನ್ನು ಮಾತ್ರ ಒಪ್ಪುತ್ತಾರೆ ಎಂದರು.

ಸಿವಿನ್ ಮತ್ತು ಕ್ರಿಮಿನಲ್ ಪ್ರಕರಣಗಳು ಎಷ್ಟಿವೆ ಎನ್ನುವುದರ ಮೇಲೆ ಸಮಾಜದ ಸ್ವಾಸ್ಥ್ಯದ ಶೇ. ವಾರು ಅಳೆಯುತ್ತಾರೆ. ಬಕ್ರಿಮಿನಲ್ ಕೇಸ್ ಹೆಚ್ಚಿದ್ದರೆ ಸಮಾಜದ ಸ್ವಾಸ್ಥ್ಯ ಕೆಟ್ಟಿದೆ ಎಂದು ಅರ್ಥ ಎಂದರು. ನ್ಯಾಯ ವ್ಯವಸ್ಥೆಯ ಪ್ರೊಸಿಜರ್ ಯಲ್ಲಿ ಏನೋ ತಪ್ಪಿದೆ ಎಂದ ಅವರು, ನ್ಯಾಯಾಲಯದ ಲ್ಲಿ ಬಾಕಿ ಉಳಿದಿರುವ  ವ್ಯಾಜ್ಯ ಗಳ ಸಂಖ್ಯೆ ಕಡಿಮೆ ಆಗಬೇಕೆಂಬ ಉದ್ದೇಶದಿಂದ ಎಲ್ಲಾ ಕಡೆಯಿಂದಲೂ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದರೂ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರೊಸಿಜರ್ ನಲ್ಲಿ ಬದಲಾವಣೆ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಇಲ್ಲದಿದ್ದರೆ ನ್ಯಾಯಾಂಗ ವ್ಯವಸ್ಥೆಗೆ ಮೂಲ ಸೌಕರ್ಯ ಒದಗಿಸಿ ಏನು ಪ್ರಯೋಜನವಿದೆ ಎಂದರು.

ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಸತ್ಯನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಕಾರ್ಯಕ್ರಮ ದಲ್ಲಿ ನ್ಯಾಯಾಧೀಶ ರ ವಸತಿ ಗೃಹ ನಿರ್ಮಾಣಕ್ಕಾಗಿ ಮಂಜೂರಾದ89 ಸೆಂಟ್ಸ್ ವಿಸ್ತೀರ್ಣ ದ ನಿವೇಶನದ ಹಕ್ಕು ಪತ್ರವನ್ನು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಇವರು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ರಂಗ ಸ್ವಾಮಿ ನಟರಾಜ್ ಅವರಿಗೆ ಹಸ್ತಾಂತರ ಮಾಡಿದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ರಂಗಸ್ವಾಮಿ ನಟರಾಜ್, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಮಣ್ಯ ಜೆ.ಎನ್, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಶಿವಮೊಗ್ಗ ಕೇಂದ್ರ ವಲಯದ ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ಕಾಂತರಾಜು ಬಿಟಿ, ಉಡುಪಿ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ್, ರಾಜ್ಯ ಉಚ್ಚನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವ ಶಂಕರೇ ಗೌಡ, ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೋನಾಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!