ಉಡುಪಿ/ದ.ಕ: ಫೆ.20 ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ವಿದ್ಯುತ್ ವ್ಯತ್ಯಯ

ಉಡುಪಿ/ದ.ಕ, ಫೆ.19 (ಉಡುಪಿ ಟೈಮ್ಸ್ ವರದಿ): ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು,  220ಕೆವಿ ಕೇಮಾರ್-ವರಾಹಿ ವಿದ್ಯುತ್ ಮಾರ್ಗ-1&2, ಲೊಕೇಷನ್ ನಂ. 474-475ರ ನಡುವೆ ಮಧ್ಯಂತರ ಗೋಪುರವನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಈಜಾಗವು ವಿದ್ಯುತ್ ಅಪಾಯದ ಸ್ಥಳವೆಂದು ಗುರುತಿಸಲ್ಪಟ್ಟಿರುವುದರಿಂದ,  ಸಾರ್ವಜನಿಕರ ಸ್ಥಳೀಯ ಜನರ ಸುರಕ್ಷತೆಯ ದೃಷ್ಟಿಯಿಂದ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿರುತ್ತದೆ. ಆದ್ದರಿಂದ ಕಾಮಗಾರಿ ಹಿನ್ನೆಲೆಯಲ್ಲಿ 220ಕೆಪಿ ಕೇಮಾರ್-ವರಾಹಿ ವಿದ್ಯುತ್ ಮಾರ್ಗ-1 ಮತ್ತು 2 ಈ ಎರಡೂ ಮಾರ್ಗಗಳ ಮೇಲೆ ಮಾರ್ಗ ಮುಕ್ತತೆ ಬೇಕಾಗಿರುವುದರಿಂದ, ಕೇಮಾರ್-ವರಾಹಿ ಮಾರ್ಗ-3 ವು 220ಕೆಪಿ ಸ್ವೀಕರಣಾ ಕೇಂದ್ರ ಹೆಗ್ಗುಂಜೆಯವರೆಗೆ ಮಾತ್ರ ಚಾಲನೆಯಲ್ಲಿರುತ್ತವೆ.

ಈ ಸಮಯದಲ್ಲಿ, 220ಕೆವಿ ಸ್ವೀಕರಣಾ ಕೇಂದ್ರ ಕೇಮಾರ್ ಮೆಲಿನ ಹೆಚ್ಚಿನ ಹೊರೆಯನ್ನು ನಿಭಾಯಿಸುವ ಸಲುವಾಗಿ ಅನಿವಾರ್ಯ ಮತ್ತು ಹೆಚ್ಚಿನ ವಿದ್ಯುತ್‌ ಹೊರೆಯ ಸಮಯದಲ್ಲಿ ಹೊರೆಯ ಒತ್ತಡವನ್ನು ನಿಭಾಯಿಸುವ ಸಲುವಾಗಿ ಸುಮಾರು 85 ಮೆ.ವ್ಯಾ.ನಷ್ಟು ಲೋಡ್ ಶೆಡ್ಡಿಂಗ್ ಮಾಡಬೇಕಾಗುತ್ತದೆ. ಆದುದರಿಂದ ನಾಳೆ ಬೆಳಿಗ್ಗೆ6 ಗಂಟೆಯಿಂದ ಸಂಜೆ 6 ಗಂಟೆ ವೆರೆಗೆ  ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ 11ಕೆವಿ ಫೀಡರ್‌ಗಳ ವಿದ್ಯುತ್ ಸರಬರಾಜಿನಲ್ಲಿ ನಿರಂತರವಾಗಿಲ್ಲದಂತೆ ಭಾಗಶಃ ವಿದ್ಯುತ್‌ ವ್ಯತ್ಯಯವುಂಟಾಗಲಿದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!