ಪಡುಬಿದ್ರೆ: ಈಜಾಡಲು ಹೋದ ಕಾಲೇಜ್ ವಿದ್ಯಾರ್ಥಿ ನೀರುಪಾಲು- ಮಲ್ಪೆ ಬೀಚ್’ನಲ್ಲೂ ಮೂವರ ರಕ್ಷಣೆ

ಪಡುಬಿದ್ರೆ:(ಉಡುಪಿ ಟೈಮ್ಸ್ ವರದಿ) ಬೀಚ್ ನಲ್ಲಿ ಈಜಾಡಲು ಹೋದ ಮೂವರು ನೀರುಪಾಲದ ಘಟನೆ ‌ಶನಿವಾರ ಸಂಜೆ ಕಾಳಿಪಟ್ನ ಎಂಬಲ್ಲಿ ನಡೆದಿದ್ದು, ಇಬ್ಬರನ್ನು ಸ್ಥಳೀಯರು‌ ರಕ್ಷಿಸಿದ್ದಾರೆ.

ಪಡುಬಿದ್ರೆಯ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿಗಳು ಮೂವರು ಸ್ನೇಹಿತರು ಇಂದು ಸಂಜೆ ಸಮುದ್ರಕ್ಕೆ ಇಳಿದ್ದಿದ್ದು, ಸಮುದ್ರದ ಬೃಹತ್‌ ಅಲೆಗೆ ಸಿಕ್ಕಿ ಮೂವರೂ ಕೂಡ ನೀರುಪಾಲಗಿದ್ದರು. ಈ ಬಗ್ಗೆಮಾಹಿತಿ ತಿಳಿದ‌ ಸ್ಥಳೀಯ ಮೀನುಗಾರರು ಇಬ್ಬರನ್ನು ರಕ್ಷಿಸಿದ್ದಾರೆ. ಇನ್ನು ‌ನೀರುಪಾಲದ ಧನುಷ್ ಎಂದು‌ ಇತಿಳಿದು‌ ಬಂದಿದ್ದು ಈತ ನಿಟ್ಟೆ ಕಾಲೇಜಿನ ವಿದ್ಯಾರ್ಥಿ ಎನ್ನಲಾಗಿದೆ. ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತ ಮಲ್ಪೆಯಲ್ಲೂ ಬೆಂಗಳೂರಿನಿಂದ ಬಂದಿದ್ದ ಐವರು ಪ್ರವಾಸಿಗರು ನೀರಿಗೆ ಇಳಿದಿದ್ದು, ಅದರಲ್ಲಿ ಮೂರು ಮಂದಿ ಸಮುದ್ರದ‌ ಅಲೆಗೆ ನೀರಿನಲ್ಲಿ ಮುಳುಗಿದ್ದರು. ತಕ್ಷಣ ಸ್ಥಳದಲ್ಲಿದ್ದ ಲೈಫ್‌ ಗಾರ್ಡ್‌ಸಿಬ್ಬಂದಿಗಳು ಮೂವರನ್ನು ರಕ್ಷಿಸಿದ್ದಾರೆಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!