ಉಡುಪಿ: 10 ರೂ.ನಾಣ್ಯ ಸ್ವೀಕರಿಸಲು ನಿರಾಕರಣೆ- ಲೀಡ್ ಬ್ಯಾಂಕ್’ಗೆ ದೂರು
ಉಡುಪಿ: ಆರ್‌ಬಿಐ ಮಾರ್ಗಸೂಚಿಗಳ ಹೊರತಾಗಿಯೂ, ಅನೇಕ ಅಂಗಡಿಯವರು, ಮಾರಾಟಗಾರರು ಮತ್ತು ಸಮಾಜದ ಜನರು 10 ರೂ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವುದರ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಹಿಂದೂ ಜನಜಾಗೃತಿ ಸಮಿತಿ ದೂರು ನೀಡಿದೆ.
ಸಮಾಜದ ಜನರು 10 ರೂ.ಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವ ಕುರಿತು ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಲೀಡ್’ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತ ರು ಹಾಗೂ ಧರ್ಮಪ್ರೆಮಿಗಳು ಉಪಸ್ಥಿತರಿದ್ದರು.
ಮನವಿಯಲ್ಲಿ ಭಾರತೀಯ ಕರೆನ್ಸಿ ವ್ಯವಸ್ಥೆಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ 10 ರೂ. ನಾಣ್ಯಗಳನ್ನು ವಿವಿಧ ಸಮಯಗಳಲ್ಲಿ 2009 ರಿಂದ 2017 ಹೀಗೆ ಪ್ರತಿ ವರ್ಷ 2 ಬಾರಿ ಆರ್‌ಬಿಐ ಪತ್ರಿಕಾ ಪ್ರಕಟಣೆಯ ಮೂಲಕ ಎಲ್ಲಾ 10 ರೂ.ನಾಣ್ಯಗಳನ್ನು 14 ಬಾರಿ ಬಿಡುಗಡೆ ಮಾಡಿದೆ.ಹೀಗೆ ಇದ್ದರೂ ಸಹ ರೂ.10 ನಾಣ್ಯಗಳುನಿಷೇಧವಾಗಿದೆ ಎಂಬ ವದಂತಿಗಳು ಮತ್ತು ತಪ್ಪು ತಿಳುವಳಿಕೆಯಿಂದಾಗಿ ಅನೇಕ ಅಂಗಡಿ-ಮಾಲಿಕರು, ಮಾರಾಟಗಾರರು ಮತ್ತು ಸಮಾಜದ ಅನೇಕ ಜನರು ಅವುಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ.
2018 ರ ಜನವರಿ17 ರಂದು ಈ ಕುರಿತು ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಆರ್‌ಬಿಐ ಪ್ರಯತ್ನಿಸಿದೆ, ಆದರೂ ಜನರು ಈ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದರಿಂದ ನಾಗರಿಕರಿಗೆ ಅನಾನುಕೂಲತೆಯಾಗುತ್ತಿದೆ. ಆರ್‌ಬಿಐ ತನ್ನ ನಿರ್ದೇಶನಗಳಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಸಹ 10 ರೂ ನಾಣ್ಯ ಸ್ವೀಕರಿಸಲು ನಿರಾಕರಿಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆಯಾ ಅಂಗಡಿಯವರು, ಮಾರಾಟಗಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ ಶಿಕ್ಷೆಗೆ ಅವಕಾಶವಿದೆ.
ಈ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು’ಸುರಾಜ್ಯ ಅಭಿಯಾನ’ ಅಡಿಯಲ್ಲಿ ಮುಂದೆ ನೀಡಲಾದ ಬೇಡಿಕೆಗಳನ್ನು ಮಾಡುತ್ತಿದೆ. ನಾಣ್ಯ ಸ್ವೀಕರಿಸಲು ಸಂಬಂಧಿಸಿದಂತೆ ಎಲ್ಲಾ ಅಂಗಡಿಯವರು ಮತ್ತು ಮಾರಾಟಗಾರ ರನ್ನು ತಲುಪಲು ಆರ್‌ಬಿಐ ಹೊರಡಿಸಿದ ತಕ್ಷಣದ ಆದೇಶಗಳು ನಾಗರಿಕರಿಗೆ ತಲುಪಿಸಲು ಪ್ರಯತ್ನಿಸಬೇಕು. ಆರ್‌ಬಿ ಐ ಆದೇಶದಲ್ಲಿ ನಾಣ್ಯವನ್ನು ನಿರಾಕರಿಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಬೇಕು. ಸುದ್ದಿ ಪತ್ರಿಕೆಗಳು, ಸ್ಥಳೀಯ ಕೇಬಲ್ ನೆಟ್‌ವರ್ಕ್, ಹೋರ್ಡಿಂಗ್‌ಗಳು, ಪ್ರಚಾರ ಟಿಪ್ಪಣಿಗಳು ಇತ್ಯಾದಿಗಳ ಮೂಲಕ ನಾಗರಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವುದ ಮತ್ತು ನಾಗರಿಕರ ಅನಾನುಕೂಲತೆ ಅಥವಾ ಅಡೆತಡೆಗಳನ್ನು ದೂರ ಮಾಡಲು ಕೂಡಲೇ ಪ್ರಕ್ರಿಯೆಗಳನ್ನು ಮಾಡಬೇಕೆಂದು ಸಮಿತಿ ವಿನಂತಿಸಿದೆ.
ನಿಮ್ಮ ಕಳಕಳಿಗೆ ಧನ್ಯವಾದಗಳು