ಬೈಂದೂರು: ಚಿಕಿತ್ಸೆಗೆ ಹೋದ ತಾಯಿ ಮಗಳು ನಾಪತ್ತೆ
ಬೈಂದೂರು: ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದ ತಾಯಿ ಮಗಳು ನಾಪತ್ತೆಯಾದ ಉಪ್ಪುಂದದಲ್ಲಿ ಘಟನೆ ನಡೆದಿದೆ.
ಉಪ್ಪುಂದ ಗ್ರಾಮದ ಸುನಂದ(45) ರವರು ಮಗಳು ಅಶ್ಮಿತಾ (8)ನಾಪತ್ತೆಯಾದವರು. ಇವರು ಫೆ.14 ರಂದು ಮಧ್ಯಾಹ್ನ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿಮನೆಯಿಂದ ಹೋದವರು ಮನೆಗೆ ವಾಪಾಸ್ಸು ಬಾರದೇ ಇದ್ದು, ಸಂಬಂಧಿಕರು ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುರಿಂದ ಸುನಂದ ಸಹೋದರ ಕೇಶವ ಖಾರ್ವಿ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.