ಸತ್ಯ ಧರ್ಮ ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಬಂಟ ಸಮುದಾಯ- ಸುರೇಶ್ ಶೆಟ್ಟಿ ಗುರ್ಮೆ
ಉಡುಪಿ: ಸತ್ಯ ಧರ್ಮ ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟ ಸಮುದಾಯವಾಗಿದ್ದು ತುಳುನಾಡಿನಲ್ಲಿ ಈ ಸಮುದಾಯ ಸೌಹಾರ್ದತೆಯಿಂದ ಬದುಕುವುದರೊಂದಿಗೆ ಸಮಾಜದ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಅವರು ಬಂಟರ ಸಂಘ ಕುಕ್ಕೆಹಳ್ಳಿ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಂಘಟನೆಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ ತಮ್ಮ ಕೈಲಾದ ಸೇವೆಯನ್ನು ಮಾಡುವುದರೊಂದಿಗೆ ಸಮಾಜದಲ್ಲಿನ ಅಶಕ್ತರೊಂದಿಗೆ ನೆರವಿನ ಹಸ್ತ ಚಾಚುವುದರೊಂದಿಗೆ ಹೃದಯ ಶ್ರೀಮಂತಿಕೆಯನ್ನು ಹೊಂದಬೇಕು. ವ್ಯಕ್ತಿ ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಆತನ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರ,ಮದಲ್ಲಿ ಸಂಘದ ಲಾಂಛನವನ್ನು ತುಳು ಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ ಶೆಟ್ಟಿ ಅನಾವರಣಗೊಳಿಸಿದರು. ಈ ವೇಳೆ ಉದ್ಯಮಿಗಳಾದ ತುಳು ಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ ಶೆಟ್ಟಿ, ಹಾಗೂ ಸೂರತ್ ನ ಉದ್ಯಮಿ ಹರೀಶ್ ಶೆಟ್ಟಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಕುಕ್ಕೆಹಳ್ಳಿ ಇದರ ಅಧ್ಯಕ್ಷರಾದ ಪ್ರಸಾದ್ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅದಾನಿ ಗ್ರೂಪ್ ಇದರ ಅಧ್ಯಕ್ಷರಾದ ಕಿಶೋರ್ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘ ಇದರ ಸಂಚಾಲಕರಾದ ಜಯರಾಜ್ ಹೆಗ್ಡೆ, ಪೆರ್ಡೂರು ಬಂಟರ ಸಂಘದ ಅಧ್ಯಕ್ಷರಾದ ಶಾಂತರಾಮ ಸೂಡ, ಬಂಟರ ಸಂಘ ಹೆಬ್ರಿ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ, ಬೆಳ್ಳಪಂಳ್ಳಿ ಸಂಘದ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಮೆರಿಡಿಯನ್ ಶಿಪ್ಪಿಂಗ್ ಗುಜರಾತ್ ಇದರ ಸದಾಶಿವ ಶೆಟ್ಟಿ, ಎಮ್ ಡಿ ಪ್ರಕೃತಿ ಲೈಫ್ ಸೈನ್ಸ್ ಕುಂಜಾಲು ಇದರ ಎಮ್ ಡಿ ದಿನೇಶ್ ಹೆಗ್ಡೆ, ಡಾ ಕೆ ಧನಪಾಲ್ ಹೆಗ್ಡೆ ಉಪಸ್ಥಿತರಿದ್ದರು.