ಹಿಂದೂ ದೇವಾಲಯ ಸರಕಾರದ ಆಡಳಿತದಿಂದ ಮುಕ್ತಿ ಸ್ವಾಗತಾರ್ಹ- ವೇದವ್ಯಾಸ್ ಕಾಮತ್

ಬೆಂಗಳೂರು: ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಸರಕಾರದ ಆಡಳಿತದಿಂದ ಮುಕ್ತಿಗೊಳಿಸುವ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಹಿಂದೂ ದೇವಾಲಯಗಳನ್ನು ಸರಕಾರದ ಆಡಳಿತದಿಂದ ಮುಕ್ತಗೊಳಿಸುವ ಮತ್ತು ಎಗ್ರೇಡ್ ದೇವಾಲಯಗಳಲ್ಲಿ ಗೋಶಾಲೆಗಳನ್ನು ತೆರೆಯಲು ಆದೇಶ ಹೊರಡಿಸುವಂತೆ ಮನವಿ ಸಲ್ಲಿಸಿದ ಅವರ, ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಿಗೊಳಿಸುವ ಕ್ರಮ ಸ್ವಾಗತಾರ್ಹ ವಾಗಿದ್ದು, ಎಲ್ಲಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಕ್ರಮವಾಗಿದ್ದು, ಆದರೆ ಹಿಂದೂ ದೇವಸ್ಥಾನಗಳನ್ನು ಮುಕ್ತಿಗೊಳಿಸುವ ಸಂದರ್ಭದಲ್ಲಿ ಎ ಗ್ರೇಡ್ ದೇವಸ್ಥಾನಗಳಲ್ಲಿ ಹೆಚ್ಚಿನ ರೀತಿಯ ಅನುದಾನ ಸಂಗ್ರಹವಾಗಲಿದ್ದು, ಈ ಅನುದಾನದಲ್ಲಿ ಎ ಗ್ರೇಡ್ ದೇವಸ್ಥಾನ ಆಡಳಿತ ಮಂಡಳಿಗಳ ವತಿಯಿಂದಲೇ ಗೋ ಶಾಲೆಗಳನ್ನು ತೆರೆಯಲು ಆದೇಶದಲ್ಲಿ ಷರತ್ತು ವಿಧಿಸಿದ್ದಲ್ಲಿ ಕಳ್ಳತನ ಮೂಲಕ, ಗೋ ಸಾಗಾಟಕ್ಕೆ ಕಡಿವಾಣ ಬೀಳಲಿದ್ದು, ಇದರಿಂದ ಗೋ ಮಾತೆಗೆ ರಕ್ಷಣೆ ಕೊಟ್ಟಂತಾಗುತ್ತದೆ, ಇದಲ್ಲದೇ ಗೋವಿನ ಸಂತತಿ ಪ್ರಮಾಣ ಕೂಡ ಹೆಚ್ಚಾಗಲಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಷರತ್ತು ವಿಧಿಸಿ ಮುಕ್ತಿಗೊಳಿಸಲು ಆದೇಶ ನೀಡಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!