ಪಡುಬಿದ್ರಿ: ಅಕ್ರಮ ಸಿಲಿಂಡರ್ ದಾಸ್ತಾನು ಅಂಗಡಿಗೆ ದಾಳಿ- 20 ಸಿಲಿಂಡರ್ ವಶಕ್ಕೆ

ಸಾಂದರ್ಭಿಕ ಚಿತ್ರ

ಪಡುಬಿದ್ರಿ ಫೆ.16(ಉಡುಪಿ ಟೈಮ್ಸ್ ವರದಿ): ಅಕ್ರಮವಾಗಿ ಸಿಲಿಂಡರ್ ಗಳನ್ನು ದಾಸ್ತಾನು ಇರಿಸಿದ್ದ  ನಡ್ಸಾಲುವಿನ‌ ಪಡುಬಿದ್ರಿ ಪೇಟೆಯ ಹರೀಶ್ ಎಂಬವರ ಸಮಸ್ತಕ ಎಂಟರ್‌‌ಪ್ರೈಸಸ್‌‌‌ ಅಂಗಡಿಗೆ ದಾಳಿ ಮಾಡಿ 20 ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಪು ತಹಶೀಲ್ದಾರರ ನಿರ್ದೇಶನದಂತೆ ದಾಳಿ ಮಾಡಿದ ಕಾಪು ತಾಲೂಕು ಆಹಾರ ನಿರೀಕ್ಷಕರಾದ ಎಂ.ಟಿ. ಲೀಲಾನಂದ ಅವರು, ಹರೀಶ್ ಎಂಬುವರ ಸಮಸ್ತಕ ಎಂಟರ್‌‌ಪ್ರೈಸಸ್‌‌‌ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಂಗಡಿಯ ಹೊರಗೆ 12 ಮತ್ತು ಒಳಗೆ 8 ಸೇರಿದಂತೆ ಒಟ್ಟು 20 ಗೃಹೋಪಯೋಗಿ ಸಿಲಿಂಡರ್‌‌ಗಳು ಇರುವುದು ಕಂಡು ಬಂದಿದೆ. ಈ ಪೈಕಿ 4 ಗ್ಯಾಸ್ ತುಂಬಿದ ಸಿಲಿಂಡರ್ ಮತ್ತು 16 ಖಾಲಿ ಸಿಲಿಂಡರ್‌‌ಗಳಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಲಿಂಡರ್ ಗಳ ದಾಸ್ತಾನಿಗೆ ಸಂಬಂಧಿಸಿದಂತೆ ಹರೀಶ್, ಸಕ್ಷಮ ಪ್ರಾಧಿಕಾರದಿಂದ ದಾಸ್ತಾನು ಮತ್ತು ವಿತರಣೆ ಮಾಡುವ ಬಗ್ಗೆ ಯಾವುದೇ ಅನುಮತಿ ಪಡೆಯದೇ LPG ( Regulation of Supply and distribution) Order-200ಏಟೆಯ ರ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ದಾಸ್ತಾನು ಇರಿಸಿದ್ದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!