ಉಡುಪಿ ಲಯನ್ಸ್ ಕ್ಲಬ್: 6.5 ಲಕ್ಷ ರೂ. ಮೊತ್ತದ ವಸ್ತುಗಳ ವಿತರಣೆ
ಉಡುಪಿ ಫೆ.16(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ನ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ಅವರು ಬ್ರಹ್ಮಗಿರಿಯ ಲಯನ್ಸ್ ಕ್ಲಬ್ ಗೆ ಭೇಟಿ ನೀಡಿದರು.
ಈ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ ಅವರು , ಜಿಲ್ಲೆಯಲ್ಲಿ ಲಯನ್ಸ್ ವತಿಯಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸದಸ್ಯರು ಹೆಚ್ಚಿನ ಸೇವೆ ನೀಡಬೇಕು ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಲಯನ್ಸ್ ವತಿಯಿಂದ ರೋಗಿಗಳಿಗೆ, ಶಾಲೆಗಳಿಗೆ, ಬಡ ಕುಟುಂಬಗಳಿಗೆ, ಆಶ್ರಮಗಳಿಗೆ ರೂ. 6.5 ಲಕ್ಷ ಮೊತ್ತದ ವಸ್ತುಗಳನ್ನು ಹಾಗೂ ಸಹಾಯ ಧನ ವಿತರಿಸಲಾಯಿತು. ಉಡುಪಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 6 ಇಸಿಜಿ ಯಂತ್ರ, ಉದ್ಯಾವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೀಲ್ ಪ್ಲೇಟ್ ಗಳನ್ನು, ಉದ್ಯಾವರ ಶಾಲೆಗೆ ಕುಕ್ಕರ್, ಚೆರ್ಕಾಡಿಯ ಆರ್ ಕೆ.ಪಿ ಶಾಲೆಗೆ, ಉದ್ಯಾವರ ಶಾಲೆ ಹಾಗೂ ಅಜ್ಜರಕಾಡಿನ ವಿವೇಕಾನಂದ ಶಾಲೆಗೆ ಸೀಲಿಂಗ್ ಫ್ಯಾನ್, ಸಂತೆಕಟ್ಟೆಯ 2 ಅಂಗನವಾಡಿ ಶಾಲೆಗಳಿಗೆ ಪೌಷ್ಟಿಕ ಆಹಾರ ಮತ್ತು ಕೋವಿಡ್ ಕಿಟ್, 4 ಮಂದಿ ಅನಾರೋಗ್ಯ ಪೀಡಿತರಿಗೆ ಧನಸಹಾಯ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಯಿತು.
ಇದರೊಂದಿಗೆ ಪಡುಕೆರೆಯ ಕರುಣಾ ಧಾಮಕ್ಕೆ ಸ್ಕೂಲ್ ಬ್ಯಾಗ್, ಒಳಕಾಡು ಶಾಲೆಗೆ ಮಳೆ ನೀರು ಕೊಯ್ಲಿ ಟ್ಯಾಂಕ್ ನಿರ್ಮಾಣ, ಕಾಡಬೆಟ್ಟು ಮಾರ್ಡನ್ ಶಾಲೆಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಗದು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಆಶ್ರಮ ಶಾಲೆಗೆ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಡಯಾನ ವಿಠಲ್ ಪೈ, ಕಾರ್ಯರ್ಶಿ ವಿಷ್ಣುದಾಸ್ ಪಾಟೀಲ್, ಕೋಶಾಧಿಕಾರಿ ಶ್ರೀಧರ್ ಭಟ್, ಮಾಜಿ ಗವರ್ನರ್ ರಾಜೀವ್ ಶೆಟ್ಟಿ, ದ್ವಿತೀಯ ಉಪ ಗವರ್ನರ್ ನೇರಿ ಕರ್ನೆಲಿಯೋ, ಸ್ವಪ್ನ ಸುರೇಶ್, ಪಾಂಡುರಂಗ ಆಚಾರ್ಯ, ಜಗದೀಶ್, ಎಸ್. ಟಿ. ಕುಂದರ್, ಲೂಯಿಸ್ ಲೋಬೊ, ಅಲೆವೂರು ದಿನೇಶ್ ಕಿಣಿ ಉಪಸ್ಥಿತರಿದ್ದರು.