| ಉಡುಪಿ ಫೆ.16 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ 2022ನೇ ಸಾಲಿನ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ಡಿ.ಎ.ಆರ್ ನಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರ (Civil Rifle Training Course) ನ್ನು ನಡೆಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಘಟಕ ಮಾಹಿತಿ ನೀಡಿದ್ದು, ನಾಗರೀಕ ಬಂದೂಕು ತರಬೇತಿಯ ಅರ್ಜಿ ನಮೂನೆಗಳು ಫೆ.15 ರಿಂದ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿ.ಎ.ಆರ್ ಪೊಲೀಸ್ ಕೇಂದ್ರಸ್ಥಾನದಲ್ಲಿ ಲಭ್ಯವಿರುತ್ತದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರೀಕರು ಅರ್ಜಿ ನಮೂನೆ ಗಳನ್ನು ಆಯಾಯಾ ಪೊಲೀಸ್ ಠಾಣೆ/ ಡಿ.ಎ.ಆರ್ ಪೊಲೀಸ್ ಕೇಂದ್ರಸ್ಥಾನದಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಆಯಾಯ ಪೊಲೀಸ್ ಠಾಣೆ/ ಡಿ.ಎ.ಆರ್ ಪೊಲೀಸ್ ಕೇಂದ್ರಸ್ಥಾನಕ್ಕೆ ಕೂಡಲೇ ಹಿಂತಿರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು (ಸಶಸ್ತ್ರ)ರವರ ಕಛೇರಿ ಉಡುಪಿ: 0820-2521111, 9480805406, ಪೊಲೀಸ್ ನಿರೀಕ್ಷಕರು (ಸಶಸ್ತ್ರ) ರವರ ಕಛೇರಿ ಉಡುಪಿ: 0820-2523444 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. | |