ಉಡುಪಿ: ಹಿಜಾಬ್ ಪ್ರಕರಣ NIA ತನಿಖೆಗೆ ಒಳಪಡಿಸಿ: ಬಜರಂಗದಳ
ಉಡುಪಿ: ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ,ಇದೊಂದು ಜಿಹಾದಿನ ಷಡ್ಯಂತ್ರ.ಮುಸಲ್ಮಾನ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಕರಣ ಹಿಂದೆ PFI, SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದೆ.
ಅಲ್ಲದೇ ಇದರ ಹಿಂದೆ ಪಾಕಿಸ್ತಾನ ತಾಲಿಬಾನ್ ನಂತಹ ಮೂಲಭೂತವಾದಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿಯಾಗಿದೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ಬಜರಂಗದಳ ನಿರಂತರವಾಗಿ ದೇಶದ ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದು, ಈ ರೀತಿಯ ದೇಶ ಒಡೆಯುವ ಕೆಲಸವನ್ನು ಮಾಡುವಂತಹ ಜಿಹಾದಿ ಶಕ್ತಿಗಳ ವಿರುದ್ಧ ಯಾವುದೇ ಉಗ್ರ ಹೋರಾಟ ಮಾಡಲು ಸಿದ್ಧವಾಗಿದೆ. ಕೋರ್ಟ್ ಕೊಟ್ಟ ತೀರ್ಪನ್ನು ಪಾಲಿಸದೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ.
ಈ ದೇಶದ ಕಾನೂನಿಗೆ ಸಂವಿಧಾನಕ್ಕೆ ಮತ್ತು ಈ ದೇಶದ ಸಂಸ್ಕೃತಿ ಸಂಸ್ಕಾರಗಳಿಗೆ ನೀವು ಗೌರವ ಕೊಡಲೇಬೇಕು ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಇರುವ ಸಂಶಯ ವ್ಯಕ್ತವಾಗುತ್ತಿದೆ. ಉಡುಪಿ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿಗಳನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನೂ ರೂಪಿಸಿದವರ ವಿರುದ್ಧ NIA (ರಾಷ್ಟ್ರೀಯ ತನಿಖಾದಳ) ಮುಖಾಂತರ ತನಿಖೆ ನಡೆಸಬೇಕೆಂದು ಬಜರಂಗದಳ ಆಗ್ರಹಿಸುತ್ತದೆ.