ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಕಾರ್ಯನಿರ್ವಹಣೆಯ ಅವಧಿ ವಿಸ್ತರಣೆ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಗಳ ಕಾರ್ಯನಿರ್ವಹಣೆಯ ಅವಧಿಯನ್ನು ರಾತ್ರಿ 7ರ ವರೆಗೆ ವಿಸ್ತರಿಸಲಾಗಿದೆ.

ಇದಕ್ಕೆ ಮೊದಲು ನೋಂದಣಿ ಕಚೇರಿಗಳು ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಈ ಕಚೇರಿಗಳ ಜನಸಂದಣಿಯನ್ನು ಪರಿಗಣಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಹಿತದೃಷ್ಟಿಯಿಂದ ಎಲ್ಲ ಉಪನೋಂದಣಾಧಿಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 9ರಿಂದ ರಾತ್ರಿ 7ಗಂಟೆಯವರೆಗೆ ನಿಗದಿ ಪಡಿಸಲಾಗಿದೆ .

ಕೋವಿಡ್ ಮೂರನೇ ಅಲೆ ಕ್ಷೀಣಿಸಿದ ಬಳಿಕ ಆಸ್ತಿ ಸೇರಿದಂತೆ ವಿವಿಧ ನೋಂದಣಿಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ, ನೋಂದಣಿ ಕಚೇರಿಗಳಲ್ಲಿ ಉದ್ದದ ಸರತಿ ಸಾಲು ಸಾಮಾನ್ಯವಾಗಿತ್ತು. ನೋಂದಣಿ ಅವಧಿಯನ್ನು ಪೂರ್ವ ನಿಗದಿಪಡಿಸಿಕೊಂಡಿದ್ದರೂ 5.30ಕ್ಕೆ ಕಚೇರಿ ವೇಳೆ ಮುಗಿಯುತ್ತಿದ್ದರಿಂದಾಗಿ ಕೆಲವರಿಗೆ ನಿಗದಿತ ದಿನಗಳಲ್ಲಿ ನೋಂದಣಿ ಅವಕಾಶ ತಪ್ಪುತ್ತಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಮಸ್ಯೆ ತಪ್ಪಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

error: Content is protected !!