ಮಂಗಳೂರು: 2.20 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಮಾರಾಟ ಯತ್ನ- ನಾಲ್ವರ ಬಂಧನ
ಮಂಗಳೂರು ಫೆ.15 (ಉಡುಪಿ ಟೈಮ್ಸ್ ವರದಿ): ಸುಮಾರು 2.20 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ (ಅಂಬರ್ ಗೀಸ್) ಯನ್ನು ಮಾರಾಟ ಮಾಡಲು ಪುಯತ್ನಿಸುತ್ತಿದ 4 ಮಂದಿ ಅಂತರಾಜ್ಯ ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಕೊಡಗಿನ ಜಾಬೀರ್ ಎಂ.ವಿ.(35), ಶಬಾದ್.ಎಲ್.ಕೆ.(27) ಕೇರಳ ಮೂಲದ ಅಸೀರ್ ವಿ.ಪಿ, (36), ಶರೀಪ್.ಎನ್. (32) ಬಂಧಿತ ಆರೋಪಿಗಳು. ಫೆ.12 ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿನ ಮೊಗರು ಬಳಿಯ ಖಾಲಿ ಸ್ಥಳದಲ್ಲಿ ಆರೋಪಿಗಳು 2.20ಕೋಟಿ ರೂ ಮೌಲ್ಯದ ತಿಮಿಂಗಿಲದ ವಾಂತಿ (ಅಂಬರ್ ಗೀಸ್) ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಿ, ಆರೋಪಿಗಳ ಬಳಿ ಇದ್ದ 2.20ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ,1070 ರೂಪಾಯಿ ನಗದು, 5 ಮೊಬೈಲ್, 1 ಕಾರುನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್.ಎನ್ ರವರ ನಿರ್ದೇಶನದಂತೆ, ಪೊಲೀಸ್ ಉಪ-ಆಯುಕ್ತರು ಮತ್ತು ಪೊಲೀಸ್ ಉಪ ಆಯುಕ್ತರ (ಅಪರಾಧ ಮತ್ತು ಸಂಚಾರ) ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ ದಿನಕರ ಶೆಟ್ಟಿ ನೇತೃತ್ವದ ತಂಡದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್ .ಪಿ, ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ.ಬಿರವರ, ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹೆಚ್.ಸಿ ರೆಜಿ, ದಯಾನಂದ,ನಂದೀಶ್ ಕುಮಾರ್,ಮಹೇಶ್, ಮಂಜುನಾಥ ಹೆಗ್ಡೆ,ಜೀವನ್ ಕುಮಾರ್ ಮತ್ತು ಕಾರ್ತಿಕ್, ಭಾಗವಹಿಸಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.