| ಬೆಂಗಳೂರು ಫೆ.15: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮತ್ತೆ ನಾಳೆಗೆ ಮುಂದೂಡಲಾಗಿದೆ.
5ನೇ ದಿನದ ವಿಚಾರಣೆ ಇಂದು ನಡೆದಿದ್ದು, ವಾದ ಆಲಿಸಿದ ರಾಜ್ಯದ ಹೈಕೋರ್ಟ್ ನ ತ್ರೀಸದಸ್ಯ ಪೀಠ ವಿಚಾರಣೆ ಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ.ವಿಚಾರಣೆ ಆರಂಭದ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ಅವರು, ಸರ್ದಾರ್ ಸಹಿದ್ನಾ ಸೈಫುದ್ದೀನ್ ಪ್ರಕರಣ, ಬಾಂಬೆ ಹೈಕೋರ್ಟ್ ನೀಡಿದ ಬೊಹ್ರಾ ಪ್ರಕರಣದ ತೀರ್ಪು ಉಲ್ಲೇಖಿಸಿದರು.ಹಾಗೂ ಎರಡು ಪ್ರತ್ಯೇಕ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
ಇದೇ ವೇಳೆ ದಕ್ಷಿಣ ಆಫ್ರಿಕಾ ದ ತೀರ್ಪನ್ನು ಮಂಡಿಸಿದ ಅವರು ರಸ್ತಾಪರಿಯಾನ್ ಸಮುದಾಯದ ಕೂದಲು ಗಂಟು ಮಾಡುವ ಸಂಪ್ರದಾಯವನ್ನು ಎತ್ತು ಹಿಡಿದ ತೀರ್ಪು ಹಾಗೂ ಮೂಗು ಬೊಟ್ಟಿನ ವಿಚಾರವಾಗಿ ಭಾರತೀಯ ವಿದ್ಯಾರ್ಥಿನಿಯ ಪರ ನೀಡಿದ ತೀರ್ಪನ್ನು ಉಲ್ಲೇಖಿಸಿದರು.ಈ ವೇಳೆ ವಾದ ಮಂಡಿಸಿದ ಅವರು, ಶಾಲೆಗಳಲ್ಲಿ ಶಿಸ್ತು, ನಿಯಮ ಪಾಲನೆ ಗೆ ಪ್ರಾಮುಖ್ಯತೆ ಇದೆ ಆದರೆ ಹಿಜಾಬ್ ಧರಿಸುವುದರಿಂದ ಶಾಲೆಯ ನಿಯಮ, ಶಿಸ್ತು ಉಲ್ಲಂಘನೆ ಆಗುವುದಿಲ್ಲ. ಸರಕಾರ ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಇತರರ ಧಾರ್ಮಿಕ ಹಕ್ಕನ್ನು ತಡೆಯಬಾರದು ಎಂದರು. ಹಾಗೂ ಶಿಕ್ಷಣ ಕಾಯ್ದೆ ಆಧರಿಸಿ ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಬಾರದು ಎಂದು ವಾದಿಸಿದರು.
ಹಾಗೂ ಶಿಕ್ಷಣ ಕಾಯ್ದೆ ಜಾರಿಗೆ ಬಂದಿದ್ದು ಹಿಜಾಬ್ ನಿರ್ಬಂಧಕ್ಕಲ್ಲ. ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿ ಗಳನ್ನು ಪ್ರತ್ಯೇಕಿಸುವುದು ಸರಿಯಲ್ಲ . ಧಾರ್ಮಿಕ ಹಕ್ಕನ್ನು ವಿದ್ಯಾರ್ಥಿನಿ ಬಳಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಸತಿ ಪದ್ದತಿ, ನರ ಬಲಿ, ದೇವದಾಸಿ ಪದ್ದತಿ ಗಳಂತಹವುಗಳನ್ನು ನಿಷೇಧಿಸಬಹುದು ಆದರೆ ಧಾರ್ಮದ ಕಡ್ಡಾಯ ಆಚರಣೆ ಗಳನ್ಬು ನಿರ್ಭಂಧಿಸಲಾಗುವುದಿಲ್ಲ ಎಂದರು.ತಮ್ಮ ಸುಧೀರ್ಘ ವಾದ ಮಂಡಿಸುತ್ತಾ, ವಕೀಲರಾದ ದೇವದತ್ ಕಾಮತ್ ಅವರು ಕೆನಡಾ ದೇಶದ ತೀರ್ಪನ್ನು ಉಲ್ಲೇಖಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ಬೇರೆ ಬೇರೆ ದೇಶದ ತೀರ್ಪು ಗಳು ಆಯಾ ದೇಶದ ಕಾನೂನಿನ ಅಡಿಯಲ್ಲಿ ನೀಡಲಾಗಿದೆ. ನಾವು ನಮ್ಮ ದೇಶದ ಕಾನೂನು ,ಸಂವಿಧಾನದ ಚೌಕಟ್ಟಿನಲ್ಲಿ ವಿಚಾರಣೆ ನಡೆಸಬೇಕು ಎಂದು ತಿಳಿಸಿದರು. ಹಾಗೂ ದೇಶಗಳಲ್ಲಿ ನೀಡಿದ ತೀರ್ಪುಗಳನ್ನು ಇಲ್ಲಿನ ಸಮಸ್ಯೆ ಗೆ ಅನ್ವಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಇತರ ವಕೀಲರಿಗೂ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಾಗ,ದೇವದತ್ ಕಾಮತ್ ಅವರು ತಮ್ಮ ವಾದವನ್ನು ಕೊನೆಗೊಳಿಸುವುದಾಗಿ ತಿಳಿಸಿ ಭಾರತದ ಸರ್ವ ಧರ್ಮ ಸಮನ್ವಯತೆ ಹೊಂದಿರುವ ದೇಶ ಇಲ್ಲಿ ಪರಸ್ಪರ ಅರ್ಥಮಾಡಿಕೊಂಡು ಭಿನ್ನಾಭಿಪ್ರಾಯ ದೂರ ಮಾಡುಕೊಳ್ಳಬೇಕು ಎಂದರು ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ದ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡು ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
ವಿಚಾರಣೆ ವೇಳೆ ಮತ್ತೋರ್ವ ಅರ್ಜಿದಾರರ ಪರ ವಕೀಲರಾದ ರವಿವರ್ಮ ಕುಮಾರ್ ಅವರು ವಾದ ಮಂಡಿಸಿ, ಕರ್ನಾಟಕ ಶಿಕ್ಷಣ ಕಾಯ್ದೆಗಳ ಸೆಕ್ಷನ್ ಗಳ ಬಗ್ಗೆ ವಿವರಣೆ ನೀಡಿದರು. ಹಾಗೂ ವಿದ್ಯಾರ್ಥಿನಿಯರು ಸಮಾನತೆ, ಸಾಮರಸ್ಯ ತೆಗೆ ಧಕ್ಕೆ ತರುವಂತ ಉಡುಪುಗಳನ್ನು. ಹಿಜಾಬ್ ಧರಿಸಲು ಯಾವುದೇ ನಿರ್ಬಂಧ ನೀಡಬಾರದು ಎಂದು ಕೇಳಿಕೊಂಡರು. ವಿವಾದದ ವಿಚಾರಣೆ ಹಲವು ಆಯಾಮಗಳಲ್ಲಿ ಸುಧೀರ್ಘವಾಗಿ ನಡೆಯುವ ಅಗತ್ಯ ಇರುವುದರಿಂದ ಹೈಕೋರ್ಟ್ ನ ತ್ರಿ ಸದಸ್ಯ ಪೀಠ ವಿಚಾರಣೆ ಯನ್ನು ನಾಳೆಗೆ ಮುಂದೂಡಿದ್ದು, ನಾಳೆ ಮತ್ತೆ 2.30 ಕ್ಕೆ ವಿಚಾರಣೆ ಮುಂದುವರೆಯಲಿದೆ.
| |