ಉಡುಪಿ “ವಿಕೆ ಪ್ಯಾರಡೈಸ್” ಕಮರ್ಷಿಯಲ್ ಕಾಂಪ್ಲೆಕ್ಸ್‌ ಕಾರ್ಯಾರಂಭ

ಉಡುಪಿ ಫೆ.14(ಉಡುಪಿ ಟೈಮ್ಸ್ ವರದಿ): ನಗರದ ಸಂಸ್ಕೃತ ಕಾಲೇಜು ಬಳಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ವಿ.ಕೆ.ಗ್ರೂಪ್ ರವರ ನೂತನ “ವಿಕೆ ಪ್ಯಾರಡೈಸ್” ಕಮರ್ಷಿಯಲ್ ಕಾಂಪ್ಲೆಕ್ಸ್‌ ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.

ಈ ನೂತನ ಕಟ್ಟಡವನ್ನು ಬಾರ್ಕೂರು ಭಾರ್ಗವ ಬೀಡು ಡಾ.ವಿದ್ಯಾವಾಚಸ್ಪತಿ ವಿಶ್ವ ಸಂತೋಷ್ ಭಾರತೀ ಶ್ರೀ ಪಾದರು ಉದ್ಘಾಟಿಸಿ ಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಆಶಿರ್ವಚನ ನೀಡಿದ ಅವರು ಸಂಸ್ಥೆ ನಗರದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮಾಲಕರಿಗೆ ಶುಭ ಹಾರೈಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ವಿಕೆ ಗ್ರೂಪ್ ನ ಸಂಸ್ಥಾಪಕ ಕರುಣಾಕರ ಎಂ.ಶೆಟ್ಟಿ ಅವರು, ಇತರರೊಂದಿಗೆ ವಿಶ್ವಾಸವನ್ನು ಇಟ್ಟುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಇವರು ಅತ್ಯಂತ ಸರಳ, ಪ್ರಾಮಾಣಿಕ, ಮುಗ್ಧ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದಾರೆ. ದೇಶದಾದ್ಯಂತ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವ ಇವರು ಉಡುಪಿಯಲ್ಲಿ ತಮ್ಮ ಉದ್ಯಮ ಆರಂಭಿಸಿದ್ದು ನಮ್ಮ ಭಾಗ್ಯ ಎಂದರು.

ನೇರವಾಗಿ, ಪ್ರಾಮಾಣಿಕವಾಗಿದ್ದರೆ ದೇವರು ನಮಗೆ ರಕ್ಷಣೆ ನೀಡುತ್ತಾರೆ ಎಂಬುದಕ್ಕೆ ಕೆ.ಎಂ ಶೆಟ್ಟಿ ಅವರು ಉತ್ತಮ ಉದಾಹರಣೆ ಎಂದ ಅವರು, ಅಪ್ರಾಮಾಣಿಕವಾಗಿ ವ್ಯವಹಾರ ಮಾಡಿದರೆ ಅದು ಶಾಶ್ವತ ವ್ಯವಹಾರ ಅಲ್ಲ ಎಂದು ಹೇಳಿದರು. ಹಾಗೂ ಕೆ.ಎಂ ಶೆಟ್ಟಿ ಅವರೊಂದಿಗಿನ ವ್ಯವಹಾರದ ಸಂದರ್ಭದಲ್ಲಿ ನಡೆದ ಘಟನೆ ಹಂಚಿಕೊಳ್ಳುತ್ತಾ, ಕೆ.ಎಂ ಶೆಟ್ಟಿ ಅವರೊಂದಿಗೆ ಮಣಿಪಾಲದಲ್ಲಿ ಜಾಗ ನೀಡುವ ವಿಚಾರವಾಗಿ ವ್ಯವಹಾರ ಮಾಡಿದ್ದೆ, ಆದರೆ ಆ ಜಾಗದ ವಿಚಾರದಲ್ಲಿ ಅಡಚಣೆ ಇದ್ದುದ್ದರಿಂದ ಅವರಿಂದ ಹಣ ಪಡೆಯಲು ಹಿಂಜರಿಕೆಯಿತ್ತು, ಆದರೂ ಅವರು ಒತ್ತಾಯ ಮಾಡಿ ಜಾಗದ ವ್ಯವಹಾರ ಪೂರ್ಣಗೊಳ್ಳುವ ಮೊದಲೇ ಅದಕ್ಕೆ ಸಂಬಂಧಿಸಿದಂತೆ ಹಣದ ಚೆಕ್ ನೀಡಿದ್ದರು.

ಇಂತಹ ಇತರರಲ್ಲಿ ನಂಬಿಕೆ ಇಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುವ ಬೇರೊಬ್ಬರ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಕೆಎಂ ಶೆಟ್ಟಿ ಅವರು ಪ್ರಮಾಣಿಕ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಕೆ ಗ್ರೂಪ್ ನ ಸಂಸ್ಥಾಪಕ ಕರುಣಾಕರ ಎಂ ಶೆಟ್ಟಿ, ಅವರ ಪತ್ನಿ ವಸಂತಿ ಕೆ.ಎಂ ಶೆಟ್ಟಿ, ಲಯನ್ಸ್ ಗವರ್ನರ್ ವಿಶ್ವನಾಥ್ ಶೆಟ್ಟಿ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಎಂಡಿ ಡಾ.ಜೆರಿ ವಿನ್ಸೆಂಟ್ ಡಯಾಸ್, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಪಿ.ಶೆಟ್ಟಿ, ಮದರ್ ಆಫ್ ಸಾರೋಸ್ ಚರ್ಚ್ ಧರ್ಮಗುರು ಚಾರ್ಲ್ಸ್ ಮನೆಜಸ್, ಮಲ್ಪೆ ಜಾಮಿಯಾ ಮಾಸೀದಿ ಮೌಲಾನ ಅಬೂಬಕ್ಕರ್ ಸಿದ್ದಿಕ್, ನಗರಸಭೆ ಸದಸ್ಯೆ ಮಾನಸಾ ಚಿದಾನಂದ ಪೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!