ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾನೆ
ಬೆಂಗಳೂರು ಫೆ.14 : ಆನ್ಲೈನ್ ಗೇಮಿಂಗ್ ಪ್ರಿಯರಿಗೆ ಹೈಕೋರ್ಟ್ ಸಿಹಿ ಸುದ್ಧಿ ನೀಡಿದೆ. ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ನಿಷೇಧಿಸಿ ಜಾರಿಗೆ ತರಲಾಗಿದ್ದ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ-2021 ತಿದ್ದುಪಡಿಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಅನ್ ಲೈನ್ ಗೇಮಿಂಗ್ ಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಆನ್‌ಲೈನ್ ಗೇಮಿಂಗ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಸರ್ಕಾರದ ಕ್ರಮ ಸಂವಿಧಾನ ಬದ್ದವಾಗಿಲ್ಲ. ಆನ್ ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಆದ್ದರಿಂದ ಪೊಲೀಸ್ ಕಾಯ್ದೆಯಲ್ಲಿನ ಆನ್ ಲೈನ್ ಗೇಮಿಂಗ್ ನಿಷೇಧಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ರದ್ದುಪಡಿಸಲಾಗುತ್ತಿದೆ. ಸಂವಿಧಾನ ಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದು ಹೇಳಿದೆ.