ಫೆ.14- ಉಡುಪಿಯಲ್ಲಿ ವಿ.ಕೆ. ಗ್ರೂಪ್’ನ ನೂತನ “ವಿಕೆ ಪ್ಯಾರಡೈಸ್” ಕಮರ್ಷಿಯಲ್ ಕಾಂಪ್ಲೆಕ್ಸ್ ಉದ್ಘಾಟನೆ
ಉಡುಪಿ ಫೆ.13(ಉಡುಪಿ ಟೈಮ್ಸ್ ವರದಿ): ನಗರದ ಸಂಸ್ಕೃತ ಕಾಲೇಜು ಬಳಿಯಲ್ಲಿ ನಿರ್ಮಾಣಗೊಂಡಿರುವ ವಿ.ಕೆ. ಗ್ರೂಪ್ ರವರ ನೂತನ “ವಿಕೆ ಪ್ಯಾರಡೈಸ್” ಕಮರ್ಷಿಯಲ್ ಕಾಂಪ್ಲೆಕ್ಸ್ ನಾಳೆ (ಫೆ.14) ಬೆಳಿಗ್ಗೆ 11.30 ಕ್ಕೆ ಉದ್ಘಾಟನೆಗೊಳ್ಳಲಿದೆ.
ಈ ನೂತನ ಕಟ್ಟಡವನ್ನು ಬಾರ್ಕೂರು ಭಾರ್ಗವ ಬೀಡು ಡಾ| ವಿದ್ಯಾವಾಚಸ್ಪತಿ ವಿಶ್ವ ಸಂತೋಷ್ ಭಾರತೀ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಮದರ್ ಆಫ್ ಸಾರೋಸ್ ಚರ್ಚ್‌ನ ಧರ್ಮಗುರು ವಂದ. ಚಾರ್ಲ್ಸ್ ಮಿನೇಜಸ್, ಇಮಾಮ್ ಜಾಮೀಯಾ ಮಸೀದಿಯ ಉಮ್ರಿ ಮೌಲಾನಾ ರಶೀದ್ ಅಹ್ಮದ್ ಆಶಿರ್ವಚನ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.ಈ ಸಂದರ್ಭದಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯುಪಿಸಿಎಲ್ ಲ್ಯಾಂಕೋ ಇಡಿ ಕಿಶೋರ್ ಅಳ್ವ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಎಂಡಿ ಡಾ.ಜೆರಿ ವಿನ್ಸೆಂಟ್ ಡಯಾಸ್, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಪಿ. ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸದಸ್ಯೆ ಮಾನಸಾ ಚಿದಾನಂದ ಪೈ ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ನೂತನ ಸಮುಚ್ಚಯವನ್ನು ಯಾವುದೇ ತರಹದ ಮಳಿಗೆ, ಸ್ಪಾ ರೆಸ್ಟೋರೆಂಟ್ ಗೆ ಯೋಗ್ಯವಾಗುವಂತೆ ಉತ್ಕೃಷ್ಟ ದರ್ಜೆಯಲ್ಲಿ ನಿರ್ಮಿಸಲಾಗಿದೆ. ಬೇಸ್‌ಮೆಂಟ್, ತಳ ಅಂತಸ್ತಿನಲ್ಲಿ ಆ್ಯಂಪಲ್ ಕಾರ್ ಪಾರ್ಕಿಂಗ್, ಜನರೇಟರ್ ಬ್ಯಾಕ್ ಅಪ್, ಪಾರ್ಕಿಂಗ್ ಏರಿಯಾ, ಡೈವೇಯಲ್ಲಿ ಇಂಟರ್ ಲಾಕಿಂಗ್ ಸಿಸ್ಟಮ್, 2 ಅಟೋ ಡೋರ್ ಲಿಫ್ಟ್, ನಿರಂತರ ನೀರು ಸರಬರಾಜು ವ್ಯವಸ್ಥೆಗಳಿವೆ. ವಾಣಿಜ್ಯ ಮಳಿಗೆಗಳ ಒಳಾಂಗಣ ವಿನ್ಯಾಸಕ್ಕೆ ಬೇಕಾಗುವ ವಿಶಾಲವಾದ ಸ್ಥಳಾವಕಾಶ, ಗ್ರಾನೈಟ್ ಫ್ಲೋರಿಂಗ್, ವಾಣಿಜ್ಯ ಬಳಕೆಯ ಸ್ಥಳಕ್ಕೆ ವಿಟ್ರಿಫೈಡ್ ಟೈಲ್ಸ್, ಎಲ್ಲ ಫೋರ್‌ಗಳಲ್ಲೂ ಆರ್ಟ್ ವಾಶ್ ರೂಮ್, ಬ್ಯಾಂಡೆಡ್ ಎಲೆಕ್ಟಿಕಲ್ ಪ್ಲಂಬಿಂಗ್ ಐಟಮ್ಸ್‌ಗಳ ಜೋಡಣೆಯೊಂದಿಗೆ ನುರಿತ ತಾಂತ್ರಿಕ ತಂತ್ರಜ್ಞರ ನೇತೃತ್ವದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದೆ.
ವಿ.ಕೆ. ಸಮೂಹದ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕರುಣಾಕರ್ ಎಂ. ಶೆಟ್ಟಿ ಅವರು 1975ರಲ್ಲಿ ವಿ.ಕೆ. ಎಂಜಿನಿಯರಿಂಗ್’ ಹೆಸರಿನಲ್ಲಿ ಉದ್ಯಮ ಸ್ಥಾಪಿಸಿದರು. ಬಳಿಕ ಟೂಲ್ ರೂಮ್ ಕಾರ್ಯಾಗಾರವ ನ್ನು ಪ್ರಾರಂಭಿಸಿದರು. ಕಸ್ಟಮೈಸ್ ಮಾಡಿದ ಇಂಜೆಕ್ಷನ್ ಮೋಲ್ಡಿಂಗ್ ಕಾರ್ಯ ಯೋಜನೆಗಳನ್ನು ನಿರ್ವಹಿಸಿದರು. ಟೂಲ್‌ರೂಮ್‌ನಲ್ಲಿ ಅಪ್ರೆಂಟಿಸ್ ಆಗಿ ಯಶಸ್ವಿಯಾದ ಅವರು ಡೈನಾಮಿಕ್ ಉದ್ಯಮದ ಪ್ರಮುಖ ಮೌಲ್ಡರ್ ಗಳಲ್ಲಿ ಒಬ್ಬರಾದರು. ಪ್ರಸ್ತುತ ಮಿಕ್ಸರ್, ಗೈಂಡರ್, ಆಹಾರ ಸಂಸ್ಕಾರಕಗಳು, ಜ್ಯೂಸರ್, ಏರ್‌ಕೂಲರ್, ಇಂಡಕ್ಷನ್ ಕುಕ್ಕರ್, ಕಸ್ಟಮೈಸ್ ಮಾಡಿದ ಪ್ಲಾಸ್ಟಿಕ್ ಘಟಕಗಳ ಕಾರ್ಖಾನೆಗಳನ್ನು ಹೊಂದಿದ್ದಾರೆ. ಮುಂಬಯಿ, ಸಿಲ್ಟಾಸ್ಸಾ, ಹಿಮಾಚಲ ಪ್ರದೇಶ, ಪಾಲ್ಘರ್ ಗಳಲ್ಲಿ ಉದ್ಯಮ ಹೊಂದಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಅಸ್ತಿತ್ವ ಸಾಧಿಸಿರುವುದಲ್ಲದೆ 18 ದೇಶಗಳಲ್ಲಿ ಉದ್ಯಮವನ್ನು ವಿಸ್ತರಿಸಿದ ಹೆಗ್ಗಳಿಕೆ ಇವರದ್ದಾಗಿದೆ.