ಸಮವಸ್ತ್ರ ಕಡ್ಡಾಯ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಹುದು- ಶಾಸಕ ಕೆ.ರಘುಪತಿ ಭಟ್

ಉಡುಪಿ: ಸಮವಸ್ತ್ರ ಕಡ್ಡಾಯ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದೆ ಇದ್ದ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗ ಬಹುದು. ಸಮವಸ್ತ್ರ ಕಡ್ಡಾಯ ಇರುವ ಕಾಲೇಜುಗಳಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಶಾಸಕ ಕೆ. ರಘುಪತಿ‌ ಭಟ್ ಹೇಳಿದರು. 

ಉಡುಪಿ ತಾಲೂಕು ಸೌಧದಲ್ಲಿ ಭಾನುವಾರ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಹಾಕಿಕೊಂಡು ಹಿಂದಿನಂತೆ ಬರಬಹುದು. ಕೋರ್ಟ್ ಅದನ್ನು‌ ಹೇಳಿಲ್ಲ. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ಹಾಕಿಕೊಂಡು ಬರಲು ಹೇಳಿದೆ ಎಂದರು. ಸಭೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕೆಂಬ ನಿರ್ಣಯ ಆಗಿದೆ ಎಂದು ಹೇಳಿದರು.

ಇನ್ನು ಶಾಂತಿ ಸಭೆಯ ಬಳಿಕ ಮಾತನಾಡಿದ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿಯು ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಿದೆ, ಅಂತಹ ವಿದ್ಯಾದಾನ ಮಾಡುವ ಜಿಲ್ಲೆಯಲ್ಲಿ ಶಾಂತಿಗೆ ಭಂಗವಾಗಬಾರದು. ಜಿಲ್ಲೆಯಲ್ಲಿ ಶಾಂತಿ ಸುವ್ಯಸ್ಥೆಯನ್ನು ಕಾಪಾಡುವುದು ಎಲ್ಲ ಸಂಘಟನೆಯ ಕರ್ತವ್ಯವಾಗಿದೆ. ಹಾಗಾಗಿ ಕೋರ್ಟ್ ಆದೇಶ ಬರುವವರೆಗೂ ಮಕ್ಕಳು ಕಾಲೇಜಿಗೆ ಸಮವ್ತ್ರವನ್ನು ಹಾಕಿಕೊಂಡು ಬರಬೇಕು ಎಂದು ಹೇಳಿದರು.

ಇನ್ನು ಜಿಲ್ಲೆಯಲ್ಲಿ ಸದ್ಯ ಕೋರ್ಟ್ ಆದೇಶದಂತೆ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಹಿಜಾಬ್‌ ಅಥವಾ ಕೇಸರಿ ಶಾಲುಗಳನ್ನು ಧರಿಸಿಕೊಂಡು ಬರುವಂತಿಲ್ಲ, ಬದಲಾಗಿ ಕಾಲೇಜಿನ ನಿಯಮದಂತೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಹಾಕಿಕೊಂಡು ಬರಬೇಕು ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸುವ್ಯಸ್ಥೆ ನೇಲೆಸುವ ನಿಟ್ಟಿನಲ್ಲಿ ಎಲ್ಲ ಸಂಘಟನೆಯ ಮುಖಂಡರನ್ನು ಸೇರಿಸಿ ಸಭೆ ಕರೆಯಲಾಗಿತ್ತು. ಆದರೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ ಸಿಎಫ್‌ಐ ಸಂಘಟನೆಯು ಈ ಸಭೆಗೆ ಹಾಜರಾಗಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!