ಕಾರ್ಕಳ: ಸುನೀಲ್ ಕುಮಾರ್ ಸಿಮೆಂಟ್ ಹಗರಣದ ತನಿಖೆಗೆ ಜಿಲ್ಲಾ ಕಾಂಗ್ರೆಸ್ ಮನವಿ
ಉಡುಪಿ: ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಅವರು ತನ್ನ ಖಾಸಗಿ ಕಛೇರಿಯ ನಿರ್ಮಾಣಕ್ಕೆ “ಮಾರಾಟಕ್ಕಿಲ್ಲ” ಎಂದು ಮುದ್ರಿತವಾದ ಸರಕಾರಿ ಕಾಮಗಾರಿಗಳಿಗೆ ಬಳಸಲ್ಪಡುವ ಸಿಮೆಂಟನ್ನು ಬಳಸಿರುವ ಬಗ್ಗೆ ವಿಡಿಯೋ ಇದ್ದು ಇದೊಂದು ಅಕ್ರಮ ಸಿಮೆಂಟ್ ಹಗರಣ ಎನ್ನುವುದರ ಬಗ್ಗೆ ಸಂಶಯವಿದ್ದು ಇದನ್ನು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಯು.ಆರ್. ಸಭಾಪತಿ ಇವರ ಮುಂದಾಳತ್ವದಲ್ಲಿ ತೆರಳಿದ ನಿಯೋಗದಲ್ಲಿ ಕೆಪಿಸಿಸಿ ಮುಖಂಡರಾದ ಮುರಳಿ ಶೆಟ್ಟಿ, ಎಂ.ಎ. ಗಫೂರ್, ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇ ಕೃಷ್ಣಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ವೈ. ಸುಕುಮಾರ್, ಕಾರ್ಕಳ ಬ್ಲಾಕ್ ಅದ್ಯಕ್ಷರಾದ ಶೇಖರ ಮಡಿವಾಳ, ಲೀಗಲ್ ಸೆಲ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಹೆಬ್ರಿ ಬ್ಲಾಕ್ ಅದ್ಯಕ್ಷರಾದ ಮಂಜುನಾಥ ಪೂಜಾರಿ, ಕಾರ್ಕಳ ಪುರಸಭಾ ಸದಸ್ಯರುಗಳಾದ ಶುಭದ್ ರಾವ್ ಹಾಗೂ ಮಧುರಾಜ್ ಶೆಟ್ಟಿ, ಕಾಂಗ್ರಸಿನ ಹಿಂದುಳಿದ ವರ್ಗದ ಅಧ್ಯಕ್ಷರಾದ ಯತೀಶ್ ಕರ್ಕೇರ, ಬ್ರಹಾವರ ಬ್ಲಾಕ್ ಮಾಜಿ ಅದ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಎಂ ಪಿ ಮೊಯಿದಿನಬ್ಬ, ಯೋಗೀಶ್ ನಯನ್ ಇನ್ನ, ಕೃಷ್ಣ ಶೆಟ್ಟಿ ನಲ್ಲೂರ್, ಅಜಿತ್ ಹೆಗ್ಡೆ ಮಾಳಾ, ಪ್ರದೀಪ್ ಶೆಟ್ಟಿ, ಹಮದ್, ಝಮೀರ್ ಹಾಗೂ ಕಾಂಗ್ರೆಸಿನ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.